ಬಂಟ್ವಾಳ: ಬುರ್ಖಾ ಧರಿಸಿದ ಮಾರುವೇಷದಲ್ಲಿ ಟೆಕ್ಸ್‌ಟೈಲ್ ಅಂಗಡಿಗೆ ನುಗ್ಗಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪತ್ನಿಯ ಘಟನೆ ಬಿಸಿರೋಡಿನಲ್ಲಿ ಸಂಚಲನ ಮೂಡಿಸಿದೆ.
ಕೃಷ್ಣಕುಮಾರ್ ಸೋಮಯಾಜಿ ತಮ್ಮ ಅಂಗಡಿಯಲ್ಲಿ ಕ್ಯಾಷ್ ಕೌಂಟರ್ ಬಳಿ ಕುಳಿತಿದ್ದ ವೇಳೆ, ಬುರ್ಖಾ ಹಾಕಿಕೊಂಡಿದ್ದ ಪತ್ನಿ ಜ್ಯೋತಿ ಸೋಮಯಾಜಿ ಅಚಾನಕ್ ಕತ್ತಿಯಿಂದ ದಾಳಿ ನಡೆಸಿ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಕೃಷ್ಣಕುಮಾರ್ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಯ ನಂತರ ಕೆಲವೇ ಕ್ಷಣಗಳಲ್ಲಿ ಆರೋಪಿತೆ ಜ್ಯೋತಿ ಸೋಮಯಾಜಿಯನ್ನು ಬಂಟ್ವಾಳ ಪೋಲಿಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





