10 December 2025 | Join group

ಭಯೋತ್ಪಾದಕರ ವಿರುದ್ಧ ಹೋರಾಡಿದ 'ನೀರಜಾ ಭಾನೋಟ್' ಅವರ ಅಪ್ರತಿಮ ತ್ಯಾಗದ ಬಗ್ಗೆ ತಿಳಿಯಿರಿ

  • 25 Nov 2025 12:37:24 PM

5 ಸೆಪ್ಟೆಂಬರ್ 1986 ರಂದು ಮಾಯಾ ನಗರಿ ಮುಂಬೈಯಿಂದ ವಿಶ್ವದ ದೊಡ್ಡಣ್ಣ ಅಮೇರಿಕಾದ ನ್ಯೂಯಾರ್ಕ್ ನಗರಕ್ಕೆ ವಿಮಾನವೊಂದು ಪ್ರಯಾಣ ಬೆಳೆಸಿತ್ತು. ಖುಷಿ ಖುಷಿಯಾಗಿ ವಿಮಾನ ಹತ್ತಿದ ಭಾರತೀಯರು ಮತ್ತು ಅಮೆರಿಕದ ಪ್ರಯಾಣಿಕರು ಆ ರೀತಿಯ ಘಟನೆಯೊಂದು ನಡೆಯಲಿದೆ ಎಂಬುದನ್ನು ಕನಸಿನಲ್ಲೂ ಊಹಿಸಿರಲಿಲ್ಲ.

 

ಆದರೆ ವಿಮಾನ ಕರಾಚಿ ತಲುಪುತ್ತಿದ್ದಂತೆಯೇ, ಏರ್‌ಪೋರ್ಟ್ ಸೆಕ್ಯುರಿಟಿ ಗಾರ್ಡ್ ವೇಷದಲ್ಲಿ 4 ಪ್ಯಾಲಸ್ತಿನಿಯನ್ ಬಂದೂಕುಧಾರಿ ಭಯೋತ್ಪಾದಕರು ವಿಮಾನದೊಳಗೆ ನುಗ್ಗಿಯೇಬಿಟ್ಟರು. ಅದೇ ಸಂದರ್ಭದಲ್ಲಿ ವಿಮಾನದ ಹಿರಿಯ ಸೇವಕಿಯಾಗಿದ್ದ ವ್ಯಕ್ತಿಯೇ ‘ದಿ ಬ್ರೆವ್’ – ಸಾಹಸಕ್ಕೆ ಮತ್ತೊಂದು ಹೆಸರು: 'ನೀರಜಾ ಭಾನೋಟ್' ರವರ ಹೋರಾಟ ಪ್ರತಿಯೊಬ್ಬ ಭಾರತೀಯರಿಗೆ ಗರ್ವ ತುಂಬುತ್ತದೆ.

 

ಆ ಸಮಯದಲ್ಲಿ ವಿಮಾನದಲ್ಲಿ 380 ಪ್ರಯಾಣಿಕರಿದ್ದು, ಭಯೋತ್ಪಾದಕರು ವಿಶೇಷವಾಗಿ ಅಮೆರಿಕದ ಯಾತ್ರಿಗಳನ್ನು ಟಾರ್ಗೆಟ್ ಮಾಡಿದ್ದರು. ಅಮೆರಿಕನ್ ಪ್ರಜೆಗಳನ್ನು ಗುರುತಿಸಲು ನಿರ್ಜಾ ಭಾನೋಟ್‌ಗೆ ಅವರ ಪಾಸ್‌ಪೋರ್ಟ್‌ಗಳನ್ನು ಸಂಗ್ರಹಿಸಲು ಭಯೋತ್ಪಾದಕರು ಆದೇಶಿಸಿದರು. ಹಿರಿಯ ವಿಮಾನ ಸೇವಕಿಯಾಗಿರುವ ನಿರ್ಜಾ ಪ್ರತಿಯೊಬ್ಬರ ಪಾಸ್‌ಪೋರ್ಟ್ ಸಂಗ್ರಹಿಸಿದರೂ, ಯಾವುದೇ ಪ್ರಯಾಣಿಕರ ಪಾಸ್‌ಪೋರ್ಟ್ ಭಯೋತ್ಪಾದಕರ ಕೈಗೆ ಸಿಗದಂತೆ ಅವನ್ನು ಅಡಗಿಸಿದರು.

 

ಸುಮಾರು 17 ಗಂಟೆಗಳ ಕಾಲ ಭಯೋತ್ಪಾದಕರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನಂತರ ಅವರ ಕೋಪ ಬುಗಿಲೆದ್ದಿತು. ಆ 17 ಗಂಟೆಗಳ ನಿಶ್ಚಲತೆಗೆ ನಂತರ, ಇದ್ದಕ್ಕಿದ್ದಂತೆ ಅವರು ಗುಂಡು ಹಾರಿಸಲು ಆರಂಭಿಸಿದರು. ಪ್ರಯಾಣಿಕರನ್ನು ರಕ್ಷಿಸಲು ನಿರ್ಜಾ ತಕ್ಷಣವೇ ಎಮರ್ಜೆನ್ಸಿ ಬಾಗಿಲನ್ನು ತೆರೆದರು. ಅದೇ ಸಂದರ್ಭದಲ್ಲಿ ಮೂರು ಮಕ್ಕಳನ್ನು ಉಳಿಸಲು ಅವರು ತೀವ್ರ ಪ್ರಯತ್ನ ಪಟ್ಟರು. ಆದರೆ ಭಯೋತ್ಪಾದಕರು ಯಾವುದೇ ಕರುಣೆ ತೋರಿಸದೇ, ನಿರ್ಜಾರವರ ಮೇಲೂ ಗುಂಡು ಹಾರಿಸಿ ಕೊಂದರು.

 

ಆ ದಾಳಿಯಲ್ಲಿ ನಿರ್ಜಾ ಸೇರಿ 20 ಜನರು ಮೃತಪಟ್ಟರು. ನಿರ್ಜಾರವರ ಎದೆಗಾರಿಕೆಯಿಂದ 350 ಕ್ಕೂ ಹೆಚ್ಚು ಜನರ ಜೀವ ಉಳಿಯಿತು. ನಿರ್ಜಾ ಭಾನೋಟ್ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಸಾಹಸ ಪ್ರಶಸ್ತಿಯಾದ ‘ಅಶೋಕ್ ಚಕ್ರ’ ನೀಡಿ ಗೌರವಿಸಲಾಗಿದೆ. ಇಂದಿಗೂ ಕೋಟ್ಯಾನೂಗಟ್ಟಲೆ ಜನರಿಗೆ ಅವರು ಸ್ಫೂರ್ತಿಯ ಮೂಲವಾಗಿದ್ದಾರೆ. ನಿರ್ಜಾರವರ ನೈಜ ಕಥೆ ಆಧಾರಿತ ಚಲನಚಿತ್ರವೂ ತೆರೆಕಂಡಿದ್ದು, ಪಠ್ಯಪುಸ್ತಕಗಳಲ್ಲಿಯೂ ಅವರ ಸಾಹಸವನ್ನು ಸೇರಿಸಲಾಗಿದೆ.