10 December 2025 | Join group

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಧಾನಿ ಮೋದಿ ಭಗವಾಧ್ವಜಾರೋಹಣ

  • 25 Nov 2025 02:25:11 PM

ಅಯೋಧ್ಯೆ: ಉತ್ತರ ಪ್ರದೇಶದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಧಾನಿ ಮೋದಿ ಭಗವಾಧ್ವಜಾರೋಹಣ ನೆರವೇರಿಸಿದ್ದಾರೆ. 

 

ದೇವಸ್ಥಾನದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜ ಅಳವಡಿಸಲಾಗಿದೆ. ಬೆಳಗ್ಗೆ 11:35 ರಿಂದ ಮಧ್ಯಾಹ್ನ 12:35 ರ ಶುಭ ಮುಹೂರ್ತದಲ್ಲಿ ಭಗವಾಧ್ವಜಾರೋಹಣ ಮಾಡಲಾಗಿದೆ.

 

ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಆಗಮಿಸಿದ ಅವರು ರಾಮಪಥದಲ್ಲಿ ರೋಡ್​ ಶೋ ನಡೆಸಿದರು. ಆ ಬಳಿಕ ಅವರು, ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿರುವ ಸಪ್ತಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಪ್ತ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾಮ ದೇವಾಲಯದ ಆವರಣದಲ್ಲಿರುವ ಶೇಷಾವತರ ಮಂದಿರಕ್ಕೆ ಪ್ರಧಾನಿ ಭೇಟಿ ನೀಡಿದರು.