10 December 2025 | Join group

ವಿಶ್ವ ಪರಂಪರೆಯ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ.!

  • 25 Nov 2025 08:06:03 PM

ವಿಜಯನಗರ: ಕರ್ನಾಟಕದ ವಿಜಯನಗರ ಜಿಲ್ಲೆಯ ತುಂಗಭದ್ರಾ ನದಿ ಮತ್ತು ಹೊಸಪೇಟೆ ಹತ್ತಿರದ 'ಹಂಪಿ' ರಾಜ್ಯದ ಅತೀ ಪುರಾತನ ಪ್ರವಾಸಿ ತಾಣಗಳಲ್ಲಿ ಒಂದು. UNESCO ವಿಶ್ವ ಪರಂಪರೆಯ ತಾಣವೆಂದೇ ಹೆಸರುವಾಸಿಯಾಗಿರುವ ಈ ತಾಣ ದಿನವೊಂದಕ್ಕೆ ದೇಶ ವಿದೇಶಗಳಿಂದ ಬರುವ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿತ್ತು.

 

ಆದರೆ ಇದೀಗ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಧಿಡೀರನೆ ಕುಸಿದಿದೆ. 2024-25 ರ ಹಣಕಾಸು ವರ್ಷದಲ್ಲಿ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು 2023-24 ವರ್ಷಕ್ಕೆ ಹೋಲಿಸಿದರೆ ಕಳೆದ ಅಕ್ಟೋಬರ್ ತಿಂಗಳವರೆಗಿನ ಅಂಕಿ ಅಂಶಗಳನ್ನು ನೋಡಿದರೆ ಕಾಲು ಅಂಶ ಪ್ರವಾಸಿಗರು ಕೂಡ ಭೇಟಿ ನೀಡಿಲ್ಲ. ವಿದೇಶಿ ಪ್ರವಾಸಿಗರ ಸಂಖ್ಯೆ 2023-24 ಹಣಕಾಸು ವರ್ಷದಲ್ಲಿ 19,838 ಆಗಿತ್ತು. ಆದರೆ 2024-25 ಹಣಕಾಸು ವರ್ಷದ (ಅಕ್ಟೋಬರ್ ತನಕ) ವರದಿಯ ಪ್ರಕಾರ, ಕೇವಲ 3,818 ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ.

 

ಈ ಗಣನೀಯ ಕುಸಿತದ ಹಿನ್ನಲೆ ಕೆಲವು ಪ್ರಮುಖ ಕಾರಣಗಳಿವೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ಸರಕಾರದ ಮೇಲೆ ಕೂಡ ಈ ಆರೋಪವಿದ್ದು, ಪ್ರವಾಸಿಗರಿಗೆ ಸರಿಯಾದ ಆತಿಥ್ಯ ಸಿಗದೇ ಇರುವುದು ಕೂಡ ಒಂದು ರೀತಿಯ ಕಾರಣ ಎನ್ನಲಾಗಿದೆ. ಪ್ರಮುಖವಾಗಿ, ಕೆಲ ತಿಂಗಳುಗಳ ಹಿಂದೆ ವಿದೇಶಿ ಪ್ರವಾಸಿಗರೊಬ್ಬರ ಹತ್ಯೆ ಈ ರೀತಿಯ ಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

 

ಒಟ್ಟಿನಲ್ಲಿ, ಹಂಪಿಗೆ ವಿದೇಶಿ ಪ್ರವಾಸಿಗಳ ಸಂಖ್ಯೆ 2024-25ರಲ್ಲಿ ಬಹಳ ಗಟ್ಟಿಯಾಗಿ ಕುಸಿದಿದೆ ಮತ್ತು ಇದರ ಪ್ರಮುಖ ಕಾರಣಗಳು ಭದ್ರತೆ, ಮೂಲಸೌಕರ್ಯದ ಕೊರತೆ ಮತ್ತು ಇನ್ನಿತರ ಮೂಲಭೂತ ಸಮಸ್ಯೆಗಳು ಕಾರಣವಾಗಿದೆ.