ಪಶ್ಚಿಮ ಬಂಗಾಳ: ಕೇಂದ್ರದ SIR (Special Identification of Voters) ಪರಿಶೀಲನಾ ಕಾರ್ಯಾಚರಣೆಗೆ ರಾಜಕೀಯ ಬಿಸಿ ಹೆಚ್ಚುತ್ತಿರುವ ನಡುವೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಬಿಜೆಪಿ ಹಾಗೂ ಚುನಾವಣೆ ಆಯೋಗದ ವಿರುದ್ಧ ಕಿಡಿಕಾರಿದರು.
ಬಿಜೆಪಿ ತನ್ನ ಪಕ್ಷದ ಕಚೇರಿಯಿಂದಲೇ ನಿಯಮಗಳನ್ನು ಹೇಳಿಕೆ ಕೊಡುತ್ತಿದ್ದು, ಚುನಾವಣಾ ಆಯೋಗ ಅದಕ್ಕೆ ತಲೆಬಾಗುತ್ತಿದೆ ಎಂದು ಅವರು ಆರೋಪಿಸಿದರು. ಬೊಂಗಾನ್‌ನಲ್ಲಿ ನಡೆದ SIR ವಿರೋಧಿ ರ್ಯಾಲಿಯಲ್ಲಿ ಮಾತನಾಡಿದ ಮಮತಾ, “ನಿಜವಾದ ಯಾರ ಮತದಾರನನ್ನೂ ಅಳಿಸಲು ನಾನು ಬಿಡುವುದಿಲ್ಲ. ಬಂಗಾಳದ ಮೇಲೆ ರಾಜಕೀಯ ದಾಳಿ ಮಾಡಿದರೆ ನಾನು ಶಾಂತವಾಗಿ ಕೂರಲು ಸಾಧ್ಯವಿಲ್ಲ” ಎಂದು ಘೋಷಿಸಿದರು.
ಬಿಹಾರದಲ್ಲಿ ನಡೆದ ಆಟ ಇಲ್ಲಿ ನಡೆಯೋದಿಲ್ಲ
ಬಿಹಾರ ಚುನಾವಣೆಗೆ ಮುನ್ನ ನಡೆದ SIR ಪ್ರಕ್ರಿಯೆಯನ್ನು ಉದಾಹರಿಸಿದ ಮಮತಾ, “ಅಲ್ಲಿ ನಡೆದ ಆಟವನ್ನ ಯಾರೂ ನೋಡಲಿಲ್ಲ. ಆದರೆ ಬಂಗಾಳ ಬೇರೆ. ಇಲ್ಲಿ ಜನರು ನೋಡ್ತಾರೆ, ಪ್ರಶ್ನಿಸ್ತಾರೆ. ಇಲ್ಲಿ ಬಿಜೆಪಿ ಯ ಆಟ ನಡೆಯುವಿದಿಲ್ಲ,” ಎಂದು ಹೇಳಿದರು.
ಬಂಗಾಳಕ್ಕೆ ಕೈ ಹಾಕಿದರೆ ದೇಶವನ್ನೇ ನಡಿಗಿಸುತ್ತೇನೆ
ತನ್ನ ಮತ್ತು ತನ್ನ ಜನರನ್ನು ಗುರಿಯಾಗಿಸಿಕೊಂಡರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತೇನೆ ಎಂದು ಮಮತಾ ಬಿಜೆಪಿ ನಾಯಕರಿಗೆ ತೀವ್ರ ಎಚ್ಚರಿಕೆ ನೀಡಿದರು. “ನನ್ನನ್ನು ಅಥವಾ ಬಂಗಾಳದ ಜನರನ್ನು ಗುರಿಯಾಗಿಸಿಕೊಂಡರೆ ಅದನ್ನು ವೈಯಕ್ತಿಕ ದಾಳಿ ಅಂತ ತೆಗೆದುಕೊಳ್ಳುತ್ತೇನೆ. ಚುನಾವಣೆಯ ನಂತರ ದೇಶವನ್ನೇ ಸುತ್ತಿ ಹೋರಾಟ ಮಾಡುತ್ತೇನೆ. ದೇಶವೇ ನಡುಗುತ್ತದೆ.”
ಚುನಾವಣೆ ಆಯೋಗಕ್ಕೂ ಗಟ್ಟಿಯಾದ ಸಂದೇಶ
ಮುಂದಕ್ಕೆ ಮಾತನಾಡಿ ಜನರಿಗೆ, " EC ಗೆ ಸ್ವಇಚ್ಛೆಯಿಂದ ಹೆಸರು ಅಳಿಸುವ ಹಕ್ಕಿಲ್ಲ. SIR ಪ್ರಕ್ರಿಯೆಗೆ ಕನಿಷ್ಠ 3 ವರ್ಷ ಬೇಕು. 2002 ರ ಬಳಿಕ ಈ ಪರಿಶೀಲನೆ ನಡೆದಿಲ್ಲ ಮತ್ತು ಯಾವುದೇ ನೈಜ ಮತದಾರರ ಹೆಸರನ್ನು ತೆಗೆಯಲಾಗುವುದಿಲ್ಲ" ಎಂಬ ಭರವಸೆಯನ್ನು ನೀಡಿದರು.
“EC ಕೃತ್ಯ ನಿಷ್ಪಕ್ಷಪಾತವಾಗಿರಬೇಕು. ಅದು ಬಿಜೆಪಿಯ ವಿಸ್ತರಣಾ ಶಾಖೆಯಾಗಬಾರದು. ಬಿಜೆಪಿ ನನ್ನ ಆಟದಲ್ಲಿ ಆಡಲು ಸಾಧ್ಯವಿಲ್ಲ. ತಮಗಾಗಿ ನಿಲ್ಲುವ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಚುನಾವಣಾ ಪ್ರಕ್ರಿಯೆಯನ್ನು ಬಿಜೆಪಿ ದುರುಪಯೋಗಪಡಿಸುತ್ತದೆ" ಎಂದು ಮಮತಾ ಆರೋಪಿಸಿದರು ಮತ್ತು “ಸರ್ಕಾರದ ಎಲ್ಲಾ ಯಂತ್ರಗಳನ್ನು ಬಳಸಿದ್ರೂ ಬಿಜೆಪಿಗೆ ಬಂಗಾಳದಲ್ಲಿ ಗೆಲುವು ಸಿಗಲ್ಲ. ನನ್ನ ಜನರ ಹಕ್ಕುಗಳಿಗಾಗಿ ನಾನು ಬದ್ಧ.” ಎಂದು ಸ್ಪಷ್ಟಪಡಿಸಿದರು.





