10 December 2025 | Join group

ಹಾಂಗ್ ಕೊಂಗ್ ಭೀಕರ ಬೆಂಕಿ: ಇದುವರೆಗೆ 65 ಮಂದಿ ಸಾವು, 279 ಜನರು ಕಾಣೆ!

  • 27 Nov 2025 06:56:42 PM

ಹೊಂಗ್‌ಕಾಂಗ್‌: ಇಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಇದುವರೆಗೆ 44 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮೃತಪಟ್ಟವರಲ್ಲಿ ಒಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

 

ಅವಶೇಷಗಳಲ್ಲಿ ಸಿಲುಕಿದ್ದ ನೂರಾರು ಜನರನ್ನು ರಕ್ಷಿಸಿ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 900 ಜನರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದ್ದು, 279 ಮಂದಿಯ ಆರೈಕೆ ಬಗ್ಗೆ ಇನ್ನೂ ಸುಳಿವು ಲಭ್ಯವಿಲ್ಲ ಎಂದು ಮಾಹಿತಿ ಹೇಳಿದ್ದಾರೆ.

 

16 ಮಹಡಿ ಕಟ್ಟಡದಿಂದ ಗಾಯಾಳುಗಳನ್ನು ರಕ್ಷಿಸಲಾಗಿದ್ದು, 70 ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

 

ಘಟನಾ ಸ್ಥಳದಲ್ಲಿ ರಕ್ಷಣಾ ಪಡೆಗಳು ನಿರಂತರವಾಗಿ ಕಾರ್ಯಚರಣೆ ನಡೆಸುತ್ತಿದ್ದು, ಬೆಂಕಿ ಸಂಪೂರ್ಣ ನಂದಿದ ನಂತರವೂ ಹುಡುಕಾಟ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.