31 January 2026 | Join group

“ಒಟ್ಟಿಗೇ ನಿಲ್ಲುತ್ತಿದ್ದೇವೆ”: ಸಿಎಂ ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಜಂಟಿ ಸಂದೇಶ

  • 29 Nov 2025 02:51:31 PM

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಕುರಿತು ರಾಜಕೀಯ ವದಂತಿಗಳು ಮರುಕಳಿಸುತ್ತಿರುವ ಸಂದರ್ಭದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಜೊತೆ ನೇರವಾಗಿ ವೇದಿಕೆ ಹಂಚಿಕೊಂಡು, “ನಾವು ಒಟ್ಟಿಗೇ ಇದ್ದೇವೆ” ಎಂಬ ಗಟ್ಟಿಮಾತು ನೀಡಿದ್ದಾರೆ.

 

ಕಾವೇರಿ ನಿವಾಸದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಹೇಳಿದರು:“ಪಕ್ಷ ಏನು ಹೇಳುತ್ತದೋ ಅದನ್ನೇ ಮಾಡುತ್ತೇವೆ. ನಾವು ಹೈಕಮಾಂಡ್‌ಗಿಂತ ಮೇಲಲ್ಲ; ಪಕ್ಷದ ನಿಷ್ಠಾವಂತ ಸೈನಿಕರು.”

 

ಅವರು 2013ರ ಘಟನೆ ನೆನೆಸಿಕೊಂಡು,“ಆ ವರ್ಷ ನನಗೆ ಸಚಿವ ಸ್ಥಾನ ಸಿಗಲಿಲ್ಲ. ಹೈಕಮಾಂಡ್ ಕಾದಿರಲು ಹೇಳಿದರೂ ನಾನು ಒಂದು ಮಾತನ್ನೂ ಆಡಲಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಮುಂದುವರಿಸುತ್ತೇನೆ,” ಎಂದರು.

 

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವರು 2028ರ ಚುನಾವಣೆಯ ಗುರಿಯನ್ನೂ ಸ್ಪಷ್ಟಪಡಿಸಿದರು:“2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಶಾಸಕರಿಗೂ ಕಾರ್ಯಕರ್ತರಿಗೂ ಪೂರ್ಣ ಬೆಂಬಲ ನೀಡುತ್ತೇನೆ.” ಎಂದರು.