
ಉಪ್ಪಿನಂಗಡಿ: ಪುತ್ತೂರು - ಉಪ್ಪಿನಂಗಡಿ ರಸ್ತೆಯಲ್ಲಿ ಬರುವ 34 - ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದರ್ಶ ನಗರದಲ್ಲೊಂದು ಆದರ್ಶ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ.
ಈ ಮಾರ್ಗದಲ್ಲಿ ತೆರಳುವ ಪ್ರತಿ ಪ್ರಯಾಣಿಕನ ಗಮನ ಸೆಳೆಯುತ್ತಿದೆ ಈ ಬಸ್ ನಿಲ್ದಾಣ. ಆಕರ್ಷಣೀಯವಾದ ಈ ಬಸ್ ನಿಲ್ದಾಣವನ್ನು ಆದರ್ಶ ನಗರದ ಆಯುರ್ವೇದ ವೈದ್ಯರ ಕುಟುಂಬವೊಂದು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿಕೊಟ್ಟಿದೆ.
ವಿಶೇಷ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾದ ಈ ಬಸ್ ನಿಲ್ದಾಣದ ಇಕ್ಕೆಲಗಳಲ್ಲಿ ಮರಗಳಿದ್ದು, ಜೊತೆಗೆ ಮೇಲ್ಚಾವಣಿಗೆ ಎರಡು ಲೇಯರ್ ಗಳಲ್ಲಿ ಹೆಂಚು ಅಳವಡಿಸಲಾಗಿದ್ದು, ನಿಲ್ದಾಣದ ಒಳಗೆ ತಂಪಿನ ಅನುಭವ ನೀಡುತ್ತಿದೆ.





