16 December 2025 | Join group

‘ನಾಲ್ಕು ಬಾರಿ ಗೆದ್ದಿದ್ದೇನೆ’ – ಇವಿಎಂ ಆರೋಪಕ್ಕೆ ಸುಪ್ರಿಯಾ ಸುಲೆ ಸ್ಪಷ್ಟ ಉತ್ತರ

  • 16 Dec 2025 11:19:46 AM

ನವದೆಹಲಿ: “ನಾನು ಒಂದೇ ಯಂತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದೇನೆ”. ಮತ ಕಳ್ಳತನ ಆರೋಪಕ್ಕೆ ಸುಪ್ರಿಯಾ ಸುಳೆ ಅಚ್ಚರಿಯ ಉತ್ತರ. ರಾಜಕೀಯದಲ್ಲಿ ಅಪರೂಪದ ನೇರ ಹೇಳಿಕೆಯಲ್ಲಿ, ಎನ್‌ಸಿಪಿ–ಶರದ್ ಪವಾರ್ ಬಣದ ಸಂಸದೆ ಸುಪ್ರಿಯಾ ಸುಳೆ ಅವರು ಇವಿಎಂ ಅಥವಾ ವಿವಿಪ್ಯಾಟ್‌ಗಳ ಮೇಲೆ ಸಂಶಯ ವ್ಯಕ್ತಪಡಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

 

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ವೇಳೆ ಮಾತನಾಡಿದ ಅವರು, “ನಾನು ಒಂದೇ ಯಂತ್ರದಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಆದ್ದರಿಂದ ಇವಿಎಂಗಳು ಅಥವಾ ವಿವಿಪ್ಯಾಟ್‌ಗಳನ್ನು ನಾನು ಪ್ರಶ್ನಿಸುವುದಿಲ್ಲ” ಎಂದು ಹೇಳಿದ್ದಾರೆ. 

 

ಇತ್ತೀಚಿನ ಚುನಾವಣೆಗಳ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಸೋಲಿಗೆ ಇವಿಎಂಗಳನ್ನು ಕಾರಣವಾಗಿ ಹೇಳುತ್ತಿರುವ ಸಮಯದಲ್ಲಿ, ಸುಳೆ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

 

ಅವರು ತಮ್ಮ ಮಾತುಗಳನ್ನು ತಂತ್ರಜ್ಞಾನದ ಮೇಲಿನ ದಾಳಿ ಎಂದು ಅಲ್ಲ,ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ ಸಮತೋಲನದ ನಿಲುವು ಎಂದು ವಿವರಿಸಿದ್ದಾರೆ.

 

ಸುಪ್ರಿಯಾ ಸುಳೆ ಎನ್‌ಸಿಪಿ–ಶರದ್ ಪವಾರ್ ಬಣದ ಕಾರ್ಯಾಧ್ಯಕ್ಷೆ ಮತ್ತು ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಜೊತೆಗಿನ ಮಹಾರಾಷ್ಟ್ರ ವಿಕಾಸ್ ಅಘಾಡಿಯ ಪ್ರಮುಖ ನಾಯಕಿ ಇವಿಎಂ ವಿಷಯದಲ್ಲಿ ವಿರೋಧ ಪಕ್ಷಗಳಲ್ಲೇ ಭಿನ್ನಾಭಿಪ್ರಾಯಗಳ ನಡುವೆ ಈ ಹೇಳಿಕೆ ಚುನಾವಣಾ ಸೋಲುಗಳಿಗೆ ಇವಿಎಂಗಳನ್ನು ದೂಷಿಸುವ ಪ್ರವೃತ್ತಿಯ ನಡುವೆ, “ಮೊದಲು ವಿಶ್ವಾಸ” ಎನ್ನುವ ಸುಳೆ ಅವರ ನಿಲುವು ವಿಭಿನ್ನವಾಗಿ ಕಾಣಿಸುತ್ತಿದೆ.