ಹೊಸ ವರ್ಷ ಎಂದರೆ ಹೊಸ ಆರಂಭ. ಹಳೆಯ ತಪ್ಪುಗಳನ್ನು ತಿದ್ದಿಕೊಂಡು, ಉತ್ತಮ ಜೀವನದತ್ತ ಸಾಗಲು ಸಂಕಲ್ಪಗಳನ್ನು ತೆಗೆದುಕೊಳ್ಳುವ ಉತ್ತಮ ಸಮಯವೇ ಹೊಸ ವರ್ಷ. 2026ರಲ್ಲಿ ನಮ್ಮ ಜೀವನವನ್ನು ಧನಾತ್ಮಕವಾಗಿ ರೂಪಿಸಬಲ್ಲ ಸರಳ ಆದರೆ ಪರಿಣಾಮಕಾರಿ ಹೊಸ ವರ್ಷದ ಸಂಕಲ್ಪಗಳು ಇಲ್ಲಿವೆ.
● ಹಿಂದಿನ ವರ್ಷ ಮಾಡಿ ಮುಗಿಸದೆ ಇರುವ ಕೆಲಸ ಕಾರ್ಯಗಳನ್ನು ಶೀಘ್ರದಲ್ಲಿ ಮುಗಿಸಿಕೊಳ್ಳುವುದು.
● ಸಕಾರಾತ್ಮಕ ಚಿಂತನೆಗಳು, ಆಲೋಚನೆಗಳು ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳೋಣ.
● ಮೊದಲು ನಮ್ಮನ್ನು ನಾವು ಪ್ರೀತಿಸಲು ಕಲಿಯುವುದು.
● ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳುವುದು.
● ನಾವು ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೆ ಒಂದಿಷ್ಟು ಎಂಬುದನ್ನು ರೂಢಿಸಿಕೊಳ್ಳುವುದು.
● ಹಿರಿಯರೊಂದಿಗೆ ಸಮಯ ಕಳೆಯುವುದು.
● ಸರಿಯಾದ ಸಮಯಕ್ಕೆ ಊಟ ನಿದ್ದೆಗಾಗಿ ಸಮಯ ಮೀಸಲಿಡುವುದು.
● ಇತರರ ಜೀವನವನ್ನು ಇಣುಕಿ ನೋಡುವುದನ್ನು ಬಿಟ್ಟು ನಮ್ಮಲ್ಲಿ ಇರುವುದರಲ್ಲೇ ಆನಂದ ಕಾಣುವುದು.
● ಆರೋಗ್ಯಕರ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳುವುದು.
● ದಿನದ ತುಸು ಸಮಯವನ್ನು ನಮಗಾಗಿ ಚಿಂತಿಸಲು ಬಿಡುವು ಮಾಡಿಕೊಳ್ಳುವುದು.
● ಎಲ್ಲರನ್ನು ಪ್ರೀತಿಸಿ ಬಾಳುವುದು.
● ಹೊಸ ಕೆಲಸವನ್ನು ಸಾಧಿಸಿ ತೋರಿಸಲು ಪ್ರಯತ್ನಿಸುವುದು.
● ಕುಟುಂಬದವರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕುವುದು.
● ಹೊಸ ಸಂಬಂಧವನ್ನು ಗೌರವಿಸುವುದು.
● ಸಮಾಜಸೇವೆಯಲ್ಲಿ ದೇವರನು ಕಾಣುವುದು.
● ದುಃಖದಿಂದ ಇರುವ ಹೃದಯಕ್ಕೆ ಸಾಧ್ಯವಾದಷ್ಟು ಸಂತೋಷ ನೀಡಲು ಪ್ರಯತ್ನಿಸುವುದು.
● ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡುವುದು.
● ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸತನವನ್ನು ಬೆಳೆಸಿಕೊಳ್ಳುವುದು.
● ಕೋಪ, ದ್ವೇಷ, ಅಸೂಯೆಯನ್ನು ಬಿಟ್ಟು ಪ್ರೀತಿಯನ್ನು ಬೆಳೆಸುವುದು.
● ತಂದೆ ತಾಯಿಗೆ ಯಾವುದೇ ರೀತಿಯ ನೋವು ನಮ್ಮಿಂದ ಆಗದಂತೆ ನಡೆದುಕೊಳ್ಳುವುದು.
● ಇತರರ ಭಾವನೆಗಳಿಗೆ ಬೆಲೆ ನೀಡಿ, ಭಾವನೆಗಳನ್ನು ಗೌರವಿಸುವುದು.
ಇವುಗಳಲ್ಲಿ ಒಂದಷ್ಟು ಸಂಕಲ್ಪಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಂಡು ಸಾಧಿಸಿ ತೋರಿಸಲು ಪ್ರಯತ್ನಸೋಣ. 2026ನೇ ಹೊಸ ವರ್ಷಕ್ಕೆ ಹೊಸ ನಿರ್ಣಯದೊಂದಿಗೆ ಪಾದಾರ್ಪಣೆ ಮಾಡುತ್ತಾ, ಈ ವರ್ಷ ವು ನಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರುವಂತಾಗಲಿ.





