ಮಂಗಳೂರು: "ಕುಡ್ಲದ ಜವನೆರೆಗ್, ಮುಲ್ಪ ನಡಪುನ ಕ್ರೈಂ ಡ್ ಇನ್ವಾಲ್ವ್ (Involve) ಅಪುನಕುಲ್ ಹೆಚ್ಚಿನಕುಲ್ ಡ್ರಗ್ಸ್ ಇನ್ಫ್ಲುಯೆನ್ಸ್ (Influence) ಡೆ ಕ್ರೈಂ ಮಲ್ತೊನ್ದು ಉಲ್ಲೆರ್. ಈ ಡ್ರಗ್ಸ್ ಡ್ ದೂರ ಇತ್ತಿಂಡ ಜೀವನ ಪೊರ್ಲು ಆಪುಂಡ್, ಇಲ್ ಲಾ ಒರಿಯುಂಡು, ಸಂಬಂಧಲಾ ಒರಿಯುಂಡು, ಸಮಾಜಗ್ ಲಾ ಎಡ್ಡೆ ಆಪುಂಡ್. ಈ ಡ್ರಗ್ಸ್ ವಿರುದ್ದದ ಹೋರಾಟಗ್ ನಿಕುಲ್ ಮಾತ ಕೈ ಜೋಡಿಸಲೆ..ಸೊಲ್ಮೆಲು - ಮಂಗಳೂರಿನ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ
ಮಂಗಳೂರಿನ ಸುತ್ತಮುತ್ತ ಹಲವಾರು ಬಾರಿ ಡ್ರಗ್ಸ್ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಿರುವ ಮಂಗಳೂರಿನ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಂಡ ಕಾಲೇಜು ವಿದ್ಯಾರ್ಥಿಗಳ ಡ್ರಗ್ಸ್ ನಂಟು ಬಗ್ಗೆ ತೀವ್ರ ಕಳವಳ ವ್ಯಕಪಡಿಸಿದ್ದರು. ಡಿಸೆಂಬರ್ 31 ರಂದು ನಡೆಸಿದ ಹೊಸ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಡ್ರಗ್ ಸೇವಿಸಿದ್ದ 52 ಮಂದಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದರು.
ಇದೀಗ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ತುಳುವಿನಲ್ಲಿ ವಿಡಿಯೋ ಒಂದನ್ನು ಮಾಡಿ ಮತ್ತೊಮ್ಮೆ ಯುವಕರಿಗೆ ಕರೆಯೊಂದನ್ನು ನೀಡಿದ್ದಾರೆ. ಅವರು ತುಳುವಿನಲ್ಲಿ ಮಾತನಾಡಿ " ಮಂಗಳೂರಿನ ಯುವಕರು, ಇಲ್ಲಿ ನಡೆಯುವ ಕ್ರೈಂ ನಲ್ಲಿ ಭಾಗವಹಿಸುವವರು ಡ್ರಗ್ಸ್ ಪ್ರಭಾವದಿಂದ ಮಾಡುತ್ತಿದ್ದಾರೆ. ಈ ಡ್ರಗ್ಸ್ ನಿಂದ ದೂರ ಇದ್ದರೆ ನಿಮ್ಮ ಜೀವ ಒಳ್ಳೆಯದಾಗುತ್ತದೆ. ಮನೆ ಕೂಡ ಉಳಿಯುತ್ತದೆ ಮತ್ತು ಸಂಬಂಧ ಕೂಡ ಉಳಿಯುತ್ತದೆ. ಇದರಿಂದ ಸಮಾಜ ಕೂಡ ಉತ್ತಮವಾಗುತ್ತದೆ. ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿ.. ನಮಸ್ಕಾರ.. ಎಂದು ಕರೆ ನೀಡಿದ್ದಾರೆ.
ಈ ಮೂಲಕ ಡ್ರಗ್ಸ್ ವಿರುದ್ಧ ಹೋರಾಟವನ್ನು ಜಾರಿಯಲ್ಲಿ ಇಟ್ಟುಕೊಂಡು, ಉತ್ತಮ ಸಮಾಜ ಕಟ್ಟುವ ಭರವಸೆಯನ್ನು ನೀಡಿದ್ದಾರೆ ಮತ್ತು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿ ಕೂಡ ಮಾಡಿದ್ದಾರೆ.





