31 January 2026 | Join group

'ರಾಶಿ ರಾಶಿ ಬೂತಾಯಿ': ಹೆಜಮಾಡಿ ಕಡಲತೀರದಲ್ಲಿ ಮೀನುಗಳ ಸುರಿಮಳೆ!

  • 05 Jan 2026 10:59:13 AM

ಉಡುಪಿ: ಹೊಸ ವರ್ಷದ ವಾರದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ದೃಶ್ಯವೊಂದು ಸಾಕ್ಷಿಯಾಯಿತು. ಲಕ್ಷಾಂತರ ಮೀನುಗಳು ಏಕಾಏಕಿ ದಡಕ್ಕೆ ಹರಿದುಬಂದು, ಕರಾವಳಿ ಪ್ರದೇಶ ಸಂಭ್ರಮದ ವಾತಾವರಣದಿಂದ ಕಂಗೊಳಿಸಿತು.

 

ಮೀನುಗಾರರ ಪ್ರಕಾರ ಸಮುದ್ರದಲ್ಲಿ ಬಲೆ ಹಾಕುತ್ತಿದ್ದ ವೇಳೆ, ಬಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮೀನುಗಳ ದೊಡ್ಡ ಗುಂಪು ಆಳವಿಲ್ಲದ ನೀರಿನತ್ತ ಈಜಿಕೊಂಡು ದಡ ಸೇರಿತು ಎಂದು ತಿಳಿಸಿದ್ದಾರೆ. ಸ್ಥಳೀಯವಾಗಿ ಬೂತಾಯಿ ಎಂದು ಕರೆಯುವ ಭಾರತೀಯ ಎಣ್ಣೆ ಸಾರ್ಡೀನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದ್ದು, ನಿವಾಸಿಗಳಿಗೆ ಸಮುದ್ರಕ್ಕೆ ತೆರಳದೆಲೇ ಬಂಪರ್ ಮೀನು ಹಿಡಿದ ಅನುಭವ ನೀಡಿತು.

 

ಸಾಮಾನ್ಯವಾಗಿ ಮೀನುಗಳು ಆಹಾರದ ಹುಡುಕಾಟ, ನೀರಿನ ತಾಪಮಾನ ಬದಲಾವಣೆ, ಆಮ್ಲಜನಕದ ಕೊರತೆ, ಶತ್ರು ಮೀನುಗಳಿಂದ ತಪ್ಪಿಸಿಕೊಳ್ಳವ ಸಲುವಾಗಿ, ಮಳೆಯ ಮತ್ತು ಗಾಳಿಯ ಪರಿಣಾಮ ಅಥವಾ ಕೆಲವೊಮ್ಮೆ ಮೊಟ್ಟೆ ಇಡುವ ಸಮಯದಲ್ಲಿ ಕರೆಯತ್ತ ಬರುವ ಸಾಧ್ಯತೆ ಇರುತ್ತದೆ.

 

ಈ ಅಚಾನಕ್ ಘಟನೆಯು ಪ್ರವಾಸಿಗರು ಹಾಗೂ ಸ್ಥಳೀಯರ ಗಮನ ಸೆಳೆದು, ಕಡಲತೀರವನ್ನು ಉಲ್ಲಾಸದ ದೃಶ್ಯವನ್ನಾಗಿ ಮಾಡಿತು. ಒಟ್ಟಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಉಚಿತವಾಗಿ ಮೀನು ಸಿಕ್ಕಿದಂತಾಗಿದೆ ಹೆಜಮಾಡಿ ಸುತ್ತಮುತ್ತಲಿನ ಪರಿಸರದ ಜನರಿಗೆ.