ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮಾರಕೊಟ್ಟು ಸಮೀಪದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸದೇ ವಾಹನಗಳು ಸಂಚರಿಸುತ್ತಿರುವ ಹಲವು ಘಟನೆಗಳು ವರದಿಯಾಗಿವೆ.
ಇತ್ತೀಚೆಗೆ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ಬಸ್‌ವೊಂದು ಟೋಲ್ ಹಣ ಪಾವತಿಸದೆ ಬೂಮ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ ಬಳಿಕ ಸ್ಥಳದಿಂದ ತೆರಳಿದೆಯೆಂದು ಆರೋಪಿಸಲಾಗಿದೆ.
ಇದೊಂದೇ ಘಟನೆ ಅಲ್ಲದೆ, ಇನ್ನೂ ಹಲವು ವಾಹನಗಳು ಟೋಲ್ ಶುಲ್ಕವನ್ನು ತಪ್ಪಿಸಲು ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಕೆಲವು ಚಾಲಕರು ಟೋಲ್ ತಪ್ಪಿಸುವ ಉದ್ದೇಶದಿಂದ ಏಕಮುಖ ಸಂಚಾರ ಮಾರ್ಗದಲ್ಲೇ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿರುವುದು ಕಂಡುಬಂದಿದ್ದು, ಇದರಿಂದ ಅಪಘಾತದ ಸಾಧ್ಯತೆ ಹೆಚ್ಚಿದೆಯೆಂದು ತಿಳಿದುಬಂದಿದೆ.





