ಕಾರಿಂಜ: ಶ್ರೀ ಕಾರಿಂಜೇಶ್ವರ ಸಾನಿಧ್ಯದಲ್ಲಿ ನಡೆಯುವ ಕೋಟಿ ಶಿವ ಪಂಚಾಕ್ಷರಿ ಪಠಣಕ್ಕೆ ಹೆಸರು ನೋಂದಾಯಿಸಲು ಶ್ರೀ ಕ್ಷೇತ್ರದಿಂದ ವಿನಂತಿ ಮಾಡಲಾಗಿದೆ. ಇದೇ ಬರುವ ದಿನಾಂಕ 26 ಫೆಬ್ರವರಿ 2025 ನೇ ಬುಧವಾರ ಸಂಜೆ 6 .00 ರಿಂದ ನೆರವೇರಲಿದೆ.
ಶಿವ ಮಂತ್ರಾಕ್ಷರಿ ಪಠಣದಿಂದ ವ್ಯಕ್ತಿವು ತನ್ನ ಜೀವನದಲ್ಲಿ ಸಂತೋಷ, ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯುವುದಲ್ಲದೆ, ತನ್ನ ಮನಸ್ಸು ಮತ್ತು ಆತ್ಮವು ಶುದ್ದೀಕರಣವಾಗುತ್ತದೆ. ಮಂತ್ರಗಳ ಪಠಣವು ಜೀವನದ ಕಷ್ಟಕರ ಪರಿಸ್ಥಿಯನ್ನು ದೂರ ಮಾಡುತ್ತದೆ. ಶಿವ ಪಂಚಾಕ್ಷರ ಮಂತ್ರವು ಶಕ್ತಿಯುತವಾದ ಮತ್ತು ಬಹಳ ಪರಿಣಾಮಕಾರಿಯಾದ ಮಂತ್ರ.
ವ್ಯಕ್ತಿಯು ಆಧ್ಯಾತ್ಮಿಕ ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ಸಮಾಜದಲ್ಲಿರುವ ರೋಗ, ಭಯ, ಸಂಕಷ್ಟ, ಸಮಸ್ಯೆ ಇತ್ಯಾದಿ ದೂರವಾಗಬೇಕಾದರೆ ಶಿವ ಪಂಚಾಕ್ಷರಿ ಮಂತ್ರದ ಪಠಣೆ ಸಾಮೂಹಿಕವಾಗಿ ನೂರಾರು ಸಾವಿರಾರು ಜನ ಸೇರಿ ಮಾಡಿಬೇಕು. ಅದರ ಫಲ ಸಂಪೂರ್ಣ ಸಮಾಜಕ್ಕೆ ದೊರೆಯಲಿದೆ.
ಆದ್ದರಿಂದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವದ ಪ್ರಯುಕ್ತ ಲೋಕ ಕಲ್ಯಾಣ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣಕ್ಕಾಗಿ ಕೋಟಿ ಶಿವ ಪಂಚಾಕ್ಷರಿ ಪಠಣ ಧಾರ್ಮಿಕ ಕಾರ್ಯವನ್ನು ನಡೆಸಲಿದ್ದಾರೆ. ಮಹಾಶಿವರಾತ್ರಿಯ ಪುಣ್ಯಕಾಲದಲ್ಲಿ ಅತ್ಯಂತ ಪುರಾಣ ಪ್ರಸಿದ್ಧ ಭೂ ಕೈಲಾಸನಾಥನ ಸನ್ನಿದಿಯಲ್ಲಿ ಜರಗಲಿದೆ.
ಸುಗಣಪುಣ್ಯ ನೀಡುವ ಕೋಟಿ ಶಿವ ಮಂತ್ರಾಕ್ಷರಿ ಪಠಣವನ್ನು ದಿನಾಂಕ 26 ಫೆಬ್ರವರಿ 2025 ನೇ ಬುಧವಾರ ಸಂಜೆ 6 .00 ರಿಂದ ಊರಿನ ಮತ್ತು ಪರವೂರಿನ ಸಮಸ್ತ ಭಕ್ತಾದಿಗಳನ್ನು ಶ್ರೀ ಕಾರಿಂಜೇಶ್ವರ ದೇವಸ್ಥಾನ, ಕಾರಿಂಜದ ತಂತ್ರಿಗಳು, ಗ್ರಾಮಾಣಿಗಳು, ಅರ್ಚಕರು, ಸಿಬ್ಬಂದಿ ವರ್ಗದವರು ಹಾಗೂ ಊರಿನ ಹತ್ತು ಸಮಸ್ತರು ಸೇರಿ ನೆರವೇರಿಸಲಿದ್ದಾರೆ, ಆದ್ದರಿಂದ ಸರ್ವ ಭಕ್ತಾಭಿಮಾಗಳಿಗೆ ಆದರಪೂರ್ವಕವಾಗಿ ಆಹ್ವಾನಿಸುತ್ತಿದ್ದಾರೆ.