24 October 2025 | Join group

ಪಾಕಿಸ್ತಾನದಲ್ಲಿ ಹಾಲು ಮತ್ತು ಹಿಟ್ಟಿನ ಬೆಲೆ ಕೇಳಿದರೆ ನೀವು ದಂಗಾಗುತ್ತೀರಿ. ಆದರೂ ಇಳಿದಿಲ್ಲ ಕೊಬ್ಬು!

  • 28 Apr 2025 08:43:40 PM

ಇಸ್ಲಾಮಾಬಾದ್, ಏಪ್ರಿಲ್ 28 : ಭಾರತ ಹೇರಿದ ನಿರ್ಬಂಧನೆಗಳಿಂದ ಪಾಕಿಸ್ತಾನದ ಪರಿಸ್ಥಿತಿ ಅದೋಗತಿಗೆ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ ಹಣದುಬ್ಬರದಿಂದ ಬೆಂದು ಉರಿಯುತ್ತಿರುವ ಪಾಕಿಸ್ತಾನದ ಪರಿಸ್ಥಿತಿ ತೀರ ಹದಗೆಟ್ಟಿದೆ.

 

ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದೆ. ಹಿಂದೂಸ್ತಾನಕ್ಕೆ ಉಗ್ರರನ್ನು ಕಳುಹಿಸಿ ದಾಳಿ ನಡೆಸುವ ಕುತಂತ್ರಿ ಬುದ್ದಿ ಹೊಂದಿರುವ ಪಾಕಿಸ್ತಾನಕ್ಕೆ ಭಾರತದಿಂದ ಹರಿಯುವ ಪ್ರಮುಖ ನದಿಗಳನ್ನೇ ಬಂದ್ ಮಾಡುವ ಮೂಲಕ ಪಾಕಿಸ್ತಾನದ ಉಸಿರುಕಟ್ಟಿಸಿದೆ. ಇದರ ಜೊತೆಗೆ ಗಡಿಯನ್ನು ಕೂಡ ಬಂದ್ ಮಾಡಿದ್ದೂ, ಪಾಕಿಸ್ತಾನದ ರಾಯಭಾರಿಗಳಿಗೆ ಗೇಟ್ ಪಾಸ್ ನೀಡಿದೆ. ಈ ಎಲ್ಲಾ ಸಮಸ್ಯೆಗಳ ಜೊತೆಗೆ ವಿಶ್ವದ ಪ್ರಮುಖ ದೇಶಗಳು ಭಾರತದ ಸಪೋರ್ಟ್ ಗೆ ನಿಂತಿರುವುದು ಪಾಕಿಸ್ತಾನಕ್ಕೆ ದೊಡ್ಡ ಆಘಾತವನ್ನು ತಂದೊದಗಿಸಿದೆ.

 

ಪಾಕಿಸ್ತಾನದಲ್ಲಿ ಕೈಗೆಟಕದ ವಸ್ತು ಮತ್ತು ಹಣ್ಣು ಹಂಪಲುಗಳ ಬೆಲೆ:

ಹಿಟ್ಟಿನ ಬೆಲೆ ಕೇಳಿದರೆ ನೀವು ಶಾಕ್!

ಪಾಕಿಸ್ತಾನದಲ್ಲಿ ಅತಿಯಾಗಿ ಬಳಕೆಯಾಗುವ ಹಿಟ್ಟಿನ ಬೆಲೆ ಆಕಾಶಕ್ಕೇರಿದೆ. 5ಕೆಜಿ ತೂಕದ ಹಿಟ್ಟಿನ ಬೆಲೆ 610 ರೂಪಾಯಿಗಳಷ್ಟಿದೆ. ಇಷ್ಟೇ ತೂಕದ ಹಿಟ್ಟಿಗೆ ಭಾರತದಲ್ಲಿ ಸರಿಸುಮಾರು 250 ರೂಪಾಯಿಯಷ್ಟಿದೆ.

 

ಕೈಗೆಟಕದ ಹಾಲು ಮತ್ತು ಮೊಟ್ಟೆ 
ಪಾಕಿಸ್ತಾನದಲ್ಲಿ ಸದ್ಯಕ್ಕೆ ಹಾಲಿನ ಬೆಲೆ 1 ಲೀಟರ್ ಬೆಲೆ 150 ರೂಪಾಯಿ ಎಂದು ತಿಳಿದು ಬಂದಿದೆ. ಮೊಟ್ಟೆಯ ಬೆಲೆ ಗರಿಷ್ಠ 27 ರೂಪಾಯಿಯಂತೆ.

 

ಟೊಮೇಟೊ ಮತ್ತು ಸೇಬು ಹಣ್ಣಿನ ಬೆಲೆ ಕೂಡ ಸೂಪರ್ ಹೈ
ಪಾಕಿಸ್ತಾನದಲ್ಲಿ ಈಗ ಒಂದು ಕಿಲೋಗ್ರಾಂ ಸೇಬು ಹಣ್ಣಿನ ಬೆಲೆ 450 ರಷ್ಟಿದೆ. ಟೊಮೇಟೊ ರೂಪಾಯಿ 100 ರಷ್ಟು ಇದೆಯಂತೆ.

 

ಕಹಿಯಾದ ಸೆಕ್ಕರೆ, ಎಣ್ಣೆ ಬೆಲೆ ಕೂಡ ಹೈ
ಹಾಲು ಮತ್ತು ಸೆಕ್ಕರೆ ಎರಡು ಸಿಹಿ ಪದಾರ್ಥ ತಯಾರಿಕೆಗೆ ಬಹಳ ಮುಖ್ಯ ಆದರೆ ಹಾಲಿನ ಬೆಲೆಯ ಜೊತೆಗೆ ಸೆಕ್ಕರೆ ಬೆಲೆಯೂ ಅತೀ ಹೆಚ್ಚಿದೆ. ಒಂದು ಕೆಜಿ ಸೆಕ್ಕರೆ ಬೆಲೆ ಸುಮಾರು 150 ರೂಪಾಯಿ ಎನ್ನಲಾಗಿದೆ. ಎಣ್ಣೆ ಬೆಲೆ ಪ್ರತಿ ಲೀಟರಿಗೆ ಸುಮಾರು 500 ರೂಪಾಯಿಯಷ್ಟಿದೆಯಂತೆ.

 

ಪಾಕಿಸ್ತಾನದ ಸದ್ಯದ ನಡೆ ಪಾಕಿಸ್ತಾನವನ್ನು ಬರ್ಬಾದ್ ಮಾಡೋದು ಮಾತ್ರ ಖಂಡಿತ. ಭಯೋತ್ಪದಕರ ಬೀಡಾಗಿರುವ ಪಾಕಿಸ್ತಾನ ಮುಂದೊಂದು ದಿನ ವಿಶ್ವದ ಭೂಪಟದಿಂದ ಕಾಣೆಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಭಾರತೀಯ ಕೆಲ ವಿಶ್ಲೇಷಕರು.