22 June 2026 |

ಪಾಕಿಸ್ತಾನದ JF-17 ಮತ್ತು F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತ ಸೇನೆ

  • 08 May 2025 09:41:06 PM

ಜಮ್ಮು, ಮೇ 08: ಪಠಾಣ್ ಕೋಟ್ ವಿಮಾನ ನಿಲ್ದಾಣದ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ ಮಾಡಲು ಪ್ರಯತ್ನ ಮಾಡಿದೆ ಆದರೆ ಭಾರತೀಯ ಸೇನೆ ಪಾಕಿಸ್ತಾನದ ಎಲ್ಲಾ ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಉಧಂಪುರದಲ್ಲಿ ಜೋರಾಗಿ ಸ್ಫೋಟಗಳು ಕೇಳಿ ಬಂದಿತ್ತು.

 

ಜಮ್ಮು ವಿಮಾನ ನಿಲ್ದಾಣದ ಮೇಲೆ ಪಾಕಿಸ್ತಾನ ನಡೆಸಿದ ಎಲ್ಲಾ ಡ್ರೋನ್ ಗಳನ್ನೂ ಕೂಡ ನಿಷ್ಕ್ರಿಯಗೊಳಿಸಿದೆ.

 

ಸೂತ್ರಗಳ ಪ್ರಕಾರ, ಪಾಕಿಸ್ತಾನದ JF-17 ಮತ್ತು F-16 ಫೈಟರ್ ಜೆಟ್ ಕೂಡ ಜಮ್ಮು ಗಡಿಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಹೇಳಲಾಗಿದೆ.

 

ಜಮ್ಮು ಮತ್ತು ಕಾಶ್ಮೀರದ ಜನರನ್ನು ಮನೆಯ ಒಳಗೆ ಇರಬೇಕಾಗಿ ವಿನಂತಿಸಲಾಗಿದೆ ಮತ್ತು ಯಾವುದೇ ಮನೆಯಲ್ಲಿ ವಿದ್ಯುತ್ ಉಪಯೋಗಿಸಬಾರದೆಂದು ಸಂದೇಶ ಕಳುಹಿಸಲಾಗಿದೆ.