20 September 2026 |

ಉಡುಪಿಯಲ್ಲಿ ಮಳೆ ಕೊರತೆ; ಭತ್ತದ ಇಳುವರಿ ಬಗ್ಗೆ ರೈತರಲ್ಲಿ ಆತಂಕ

  • 20 Sep 2026 10:51:21 AM

ಉಡುಪಿ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಭತ್ತದ ಗದ್ದೆಗಳಲ್ಲಿ ತೆನೆ ಹೊರಬಂದು ಕಾಳು ಕಟ್ಟುವ ಪ್ರಮುಖ ಹಂತ ಇದೀಗ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮಳೆ ಕೊರತೆ ಎದುರಾಗಿರುವುದು ರೈತರ ಚಿಂತೆಗೆ ಕಾರಣವಾಗಿದೆ.

 

ಕಳೆದ 15 ದಿನಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೇವಲ 4.2 ಸೆಂ.ಮೀ. ಮಳೆ ದಾಖಲಾಗಿದೆ. ಭತ್ತದ ಬೆಳೆಗೆ ಅಗತ್ಯವಿರುವ ಸಮಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದರಿಂದ ಬೆಳೆ ಬೆಳವಣಿಗೆ ಹಾಗೂ ಕಾಳು ಕಟ್ಟುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

 

ಈ ಹಂತದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುವುದು ಭತ್ತದ ಬೆಳೆಗೆ ಪ್ರಮುಖವಾಗಿದ್ದು, ಮಳೆ ಮತ್ತಷ್ಟು ವಿಳಂಬವಾದರೆ ಇಳುವರಿ ಕುಸಿಯುವ ಆತಂಕ ರೈತರಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.