21 June 2025 | Join group

ಪಾಕಿಸ್ತಾನದ ಪ್ರಧಾನಿ ಬಿಲದಿಂದ ಬಿಲಕ್ಕೆ ವರ್ಗಾವಣೆ : ಕರಾಚಿ ಬಂದರು ಡಮಾರ್

  • 09 May 2025 09:44:51 AM

ದೆಹಲಿ, ಮೇ 09: ಭಾರತದ ದಾಳಿ ಇದೀಗ ಸಂಪೂರ್ಣ ಪಾಕಿಸ್ತಾನವನ್ನು ಆವರಿಸಿಕೊಂಡಿದೆ. ನಿನ್ನೆ ಸಂಜೆ ಹೊತ್ತಿಗೆ ಪಾಕಿಸ್ತಾನದ ಜಮ್ಮು ಪ್ರದೇಶದಲ್ಲಿ ನಡೆಸಿದ ಡ್ರೋನ್ ಮತ್ತು ಫೈಟರ್ ಜೆಟ್ ದಾಳಿಗೆ ವಿರುದ್ಧ ಭಾರತ ತೀವ್ರ ಸ್ವರೂಪದ ದಾಳಿಯನ್ನು ಪಾಕಿಸ್ತಾನದ ಮೇಲೆ ನಡೆಸಿದೆ.

 

ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ಭುಗಿಲೆದ್ದಿದೆ ಎಂದು ವರದಿಗಳು ಬರುತ್ತಿದೆ. ಭಾರತೀಯ ನೌಕಾಪಡೆಯು ಈಗ ಈ ಕಡಲ ದಾಳಿಯ ಮೂಲಕ ನಿರ್ಣಾಯಕವಾಗಿ ಸಂಘರ್ಷವನ್ನು ಪ್ರವೇಶಿಸಿದೆ. ಕರಾಚಿ ಬಂದರನ್ನು ಪುಡಿ ಮಾಡಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಭಾರತ ಸರಕಾರದ ಕಡೆಯಿಂದ ಸದ್ಯಕ್ಕೆ ಸಂಪೂರ್ಣ ಯುದ್ಧ ಘೋಷಣೆಯ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

 

ಭಾರತ ನೌಕಾ ಸೇನೆಯ ಐಎನ್‌ಎಸ್ ವಿಕ್ರಾಂತ್ ಬಂದರಿನಲ್ಲಿರುವ ಪ್ರಮುಖ ಮಿಲಿಟರಿ ಮತ್ತು ಆರ್ಥಿಕ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಟೊಮಾಹಾಕ್ ಮತ್ತು ಬ್ರಹ್ಮೋಸ್-ವರ್ಗದ ಶಸ್ತ್ರಾಸ್ತ್ರಗಳು ಸೇರಿದಂತೆ ಹತ್ತು ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯು ಸೌಲಭ್ಯದ ದೊಡ್ಡ ಭಾಗಗಳನ್ನು ನಾಶಪಡಿಸಿದೆ ಎಂದು ಹೇಳಲಾಗುತ್ತದೆ ಮತ್ತು ಇದು ಪಾಕಿಸ್ತಾನದ ಆರ್ಥಿಕತೆಗೆ ಗಮನಾರ್ಹ ಹೊಡೆತವನ್ನು ನೀಡುತ್ತದೆ.

 

ಭಾರತೀಯ ಸೇನೆ ಪಾಕಿಸ್ತಾನದ ಪ್ರಮುಖ ನಗರಗಳಿಗೆ ಸ್ವಲ್ಪ ಪ್ರಮಾಣದ ದಾಳಿಯನ್ನು ಬುಧವಾರ ರಾತ್ರಿಯೇ ನಡೆಸಿತ್ತು ಆದರೆ ಪಾಕಿಸ್ತಾನ ನಡೆಸಿದ ಗುರುವಾರ ಸಂಜೆಯ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಪ್ರಮುಖ ನಗರಗಳಾದ ಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ಮತ್ತು ಇನ್ನಿತ್ತರ ಪ್ರದೇಶಗಳಿಗೆ ತೀವ್ರ ಸ್ವರೂಪದ ದಾಳಿಯನ್ನು ನಡೆಸಿದೆ.

 

ಗುರುವಾರ ರಾತ್ರಿ ಇಡೀ ಭಾರತ ನಡೆಸಿದ ದಾಳಿಯಲ್ಲಿ, ಪಾಕಿಸ್ತಾನದ ಪ್ರಧಾನಿ ನೆಲೆಸಿರುವ ಕೇವಲ 20 ಕಿ.ಮೀ ದೂರದಲ್ಲಿ ಭಾರತ ದಾಳಿ ನಡೆಸಿತ್ತು. ಇದರಿಂದ ಹೆದರಿದ ಪಾಕಿಸ್ತಾನದದ ಪ್ರಧಾನಿ ಬಂಕರ್ ಒಳಗೆ ಬಚ್ಚಿಟ್ಟುಕೊಂಡಿದ್ದಾರೆ ಎಂಬ ವರದಿ ಬಂದಿತ್ತು. ಪಾಕಿಸ್ತಾನದ ಪ್ರಧಾನಿ ಬಿಲದಿಂದ ಬಿಲಕ್ಕೆ ಸ್ಥಳಾಂತರಗೊಂಡು ತಮ್ಮ ಜೀವಕ್ಕೆ ಏನು ಅಪಾಯವಾಗದಂತೆ ಕಾಪಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 

ಭಾರತೀಯ ನೌಕಾಪಡೆಯು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಿಟ್ಟ ಮತ್ತು ವಿನಾಶಕಾರಿ ದಾಳಿಯನ್ನು ನಡೆಸಿದೆ, ಇದು 1971 ರ ಯುದ್ಧದ ನಂತರದ ಮೊದಲ ದಾಳಿಯಾಗಿದೆ. ಪಾಕಿಸ್ತಾನದ ಸುಮಾರು 60% ವ್ಯಾಪಾರವನ್ನು ನಿರ್ವಹಿಸುವ ಮತ್ತು ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಚೇರಿಯಾಗಿಯೂ ಕಾರ್ಯನಿರ್ವಹಿಸುವ ಕರಾಚಿ ಬಂದರನ್ನು ಪಾಕಿಸ್ತಾನದ ಆರ್ಥಿಕ ಜೀವನಾಡಿ ಎಂದು ಕರೆಯಲಾಗುತ್ತದೆ.

 

ಗುರುವಾರ ಸಂಜೆ ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಫೈಟರ್ ಜೆಟ್ ಯುದ್ಧ ವಿಮಾನಗಳನ್ನು ಭಾರತ ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದರಲ್ಲಿ  JF-17 ಮತ್ತು F-16 ಯುದ್ಧ ವಿಮಾನಗಳು ಸೇರಿದ್ದವು. ಪಾಕಿಸ್ತಾನದ ವಿಫಲ ಪ್ರಯತ್ನವಾಗಿತ್ತು ಆ ದಾಳಿ. ಆದರೆ ಭಾರತ ನೀಡುತ್ತಿರುವ ಪ್ರತಿದಾಳಿ ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡುತ್ತಿದೆ.