21 June 2025 | Join group

ಫೇಸ್ಬುಕ್ ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರ ನಕಲಿ ಅಕೌಂಟ್ ನಿರ್ಮಿಸಿ ಫೇಕ್ ಸಂದೇಶ ರವಾನೆ - ಎಚ್ಚರದಿಂದ ಇರಲು ಕರೆ

  • 09 May 2025 05:44:00 PM

ಇಂದು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರ ಅಕೌಂಟ್ ನಲ್ಲಿ 'ಪ್ರಮುಖ ಮಾಹಿತಿ' ಎಂದು ಹೆಡ್ ಲೈನ್ ಹಾಕಿ ಭಾರತದಾದ್ಯಂತ ಸೈಬರ್ ದಾಳಿಗೆ ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ ಎಂದು ನಮೂದಿಸಿ, ಜನತೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಸಂದೇಶ ಈಗ ಎಲ್ಲೆಡೆ ಹರಿಯುತ್ತಿದೆ.

 

'ಪತ್ರಿಕಾ ಮಾಹಿತಿ ಬ್ಯೂರೋ (Press Information Bureau)' ಇಂಡಿಯಾ ತನ್ನ ಎಕ್ಸ್ ನಲ್ಲಿ ಈ ಸಂದೇಶದ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಇದು ನಕಲಿ ಸಂದೇಶ ಎಂದು ತಿಳಿಸಿದೆ.

 

#PIBFactCheck ನಲ್ಲಿ ಈ ರೀತಿ ನಮೂದಿಸಲಾಗಿದೆ,


* ಈ ಫೇಸ್ ಬುಕ್ ಅಕೌಂಟ್ ನಕಲಿಯಾಗಿದೆ (Fake).
* ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ (National Security Advisor) ಯಾವುದೇ ಫೇಸ್ ಬುಕ್ ಅಕೌಂಟ್ ಹೊಂದಿಲ್ಲ.

* ನಾಗರಿಕರು ಎಚ್ಚರಿಕೆಯಿಂದ ಇರಲು ಮತ್ತು ಯಾವುದೇ ವಂಚಕ ಅಥವಾ ನಕಲಿ ಪ್ರೊಫೈಲ್‌ಗಳೊಂದಿಗೆ ತಮ್ಮನ್ನು ದೂರವಿರಿಸಬೇಕಾಗಿ ಸೂಚಿಸಲಾಗಿದೆ.

* ಅಧಿಕೃತ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಿ.

#IndiaFightsPropaganda ಎಂದು ನಮೂದಿಸಿ, ಜನತೆ ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ