ಕುಮಾರಧಾರ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ : ಕೌಟುಂಬಿಕ ಕಾರಣವೇ ಈ ನಿರ್ಧಾರಕ್ಕೆ ಕಾರಣ ಎಂಬ ಶಂಕೆ

  • 12 May 2025 08:04:48 PM

ಸುಬ್ರಮಣ್ಯ, ಮೇ, 12: ಸುಬ್ರಮಣ್ಯದ ಕುಮಾರಧಾರ ನದಿಯಲ್ಲಿ ಮಹಿಳೆಯ ಮೃತ ದೇಹವೊಂದು ಪತ್ತೆಯಾಗಿದೆ. ಹಾಸನದ ಗೀತಾ ( 51) ಮೃತರು ಎಂದು ತಿಳಿದುಬಂದಿದೆ. ಕುಮಾರಧಾರ ನದಿಯಲ್ಲಿ ಮಹಿಳೆಯ ಮೃತ ದೇಹವೊಂದು ತೇಲುತಿರುವುದನ್ನು ಕಂಡ ಸ್ಥಳೀಯರು, ಪಕ್ಕದ ಸುಬ್ರಮಣ್ಯ ಠಾಣೆಗೆ ತಿಳಿಸಿದ್ದಾರೆ.

 

ಪೊಲೀಸರು ಪರಿಶೀಲನೆ ನಡೆಸಿ ಗುರುತು ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಹಾಸನದ ತಂಡ ಆಗಮಿಸಿ ಮಹಿಳೆಯ ಗುರುತು ಪತ್ತೆ ಹಚ್ಚಿದ್ದಾರೆ. 

 

ಮೂರು ದಿನಗಳಿಂದ ಗೀತಾ ಅವರು ಮನೆಯಿಂದ ನಾಪತ್ತೆಯಾಗಿದ್ದರಂತೆ. ಎರಡು ದಿನಗಳ ಹಿಂದೆ ನದಿಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಕೌಟುಂಬಿಕ ಮನಸ್ತಾಪದಿಂದ ಈ ರೀತಿಯ ನಿರ್ಧಾರಕ್ಕೆ ತೆಗೆದುಕೊಂಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.