17 August 2025 | Join group

ಸುಮ್ಮನೆ ಬೂಟಾಟಿಕೆಗೆ ನಾಲ್ಕು ಫ್ಲೈಟ್ಸ್ ಮೇಲಕ್ಕೆ ಕಳಿಸಿದ್ದಾರೆ ಹೊರತು ಬೇರೆ ಏನು ಮಾಡಿಲ್ಲ : ಕಾಂಗ್ರೆಸ್ ಶಾಸಕನ ಹೇಳಿಕೆ

  • 16 May 2025 10:23:11 AM

ಕೋಲಾರ, ಮೇ 16: ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ 'ಆಪರೇಷನ್ ಸಿಂಧೂರ್' ವಿರುದ್ಧ ಹೇಳಿದ ಮಾತು ಈಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ. 'ಸುಮ್ಮನೆ ಬೂಟಾಟಿಕೆಗೆ ನಾಲ್ಕು ಫ್ಲೈಟ್ಸ್ ಮೇಲಕ್ಕೆ ಕಳಿಸಿದ್ದಾರೆ ಹೊರತು ಬೇರೆ ಏನು ಮಾಡಿಲ್ಲ' ಎಂದು ಟಿವಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಹೇಳಿದ್ದಾರೆ.

 

'26 ಜನ ಗಂಡು ಮಕ್ಕಳು ಸತ್ತರು, ಆ ಹೆಣ್ಣು ಮಕ್ಕಳಿಗೆ ಇದೇನಾ ಪರಿಹಾರ, ಸಮಾಧಾನ, ಗೌರವ ಕೊಡೋದು?' ಎಂದು ಕೇಂದ್ರ ಸರಕಾರಕ್ಕೆ ಪ್ರಶ್ನೆ ಮಾಡಿದರು. ಅಲ್ಲಿ ಹೊಡೆದು ಬಿಟ್ವಿ , ಇಲ್ಲಿ ಹೊಡೆದು ಬಿಟ್ವಿ ಅಂತಾರೆ. ಟಿವಿ ಮಾಧ್ಯಮಗಳಲ್ಲಿ ಒಬ್ಬ ಅಲ್ಲಿ ಹೊಡೆದಿದ್ದಾರೆ ಎಂದರೆ ಇನ್ನೊಬ್ಬ ಇಲ್ಲಿ ಹೊಡೆದ ಎಂದು ತೋರಿಸುತ್ತಾರೆ, ಯಾವುದು ನಂಬೋದು, ಯಾವುದು ಬಿಡೋದು ಅಂತ' ರೇಗಿಸಿದ್ದಾರೆ.

 

'ನಮ್ಮ ಬಾರ್ಡರ್ ಒಳಗೆ ಬಂದು 3 ದಿವಸ ಇಲ್ಲೇ ನಿಂತು ನಮ್ಮವರನ್ನು ಹೊಡೆಗೂ ಹೋಗುತ್ತಾರೆಂದರೆ, ಪಾಪ ಸತ್ತವರ ಮನೆಯ ಗತಿ ಏನು' ಎಂದು ಹೇಳಿದರು. ಈಗ 'ಆಪರೇಷನ್ ಸಿಂಧೂರ್' ಬಗ್ಗೆ ಈ ರೀತಿಯ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಲಿದೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ದೇಶದ ಸೈನಿಕರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಬೇಸರದ ಸಂಗತಿ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.