01 February 2026 | Join group

ಮಂಗಳೂರಿನ ಹಳೆ ಡಿಸಿ ಕಚೇರಿ 'ಹೇರಿಟೇಜ್ ಮ್ಯೂಸಿಯಂ'ಗೆ ರೂಪಾಂತರ – ಪಡೀಲಿನಲ್ಲಿ ಹೊಸ ಡಿಸಿ ಕಚೇರಿ ಉದ್ಘಾಟನೆ

  • 16 May 2025 11:20:12 AM

ಮಂಗಳೂರು, ಮೇ 16: ಮಂಗಳೂರು ನಗರದ ಹೃದಯ ಭಾಗವಾದ ಹಂಪನಕಟ್ಟದಲ್ಲಿದ್ದ ಡಿಸಿ ಕಚೇರಿ ಇನ್ನು ಮುಂದೆ ಮ್ಯೂಸಿಯಂ ಆಗಿ ಕಾಣಲಿದೆ. ಕೆಂಪು ಇಟ್ಟಿಗೆಗಳಿಂದ ಬ್ರಿಟಿಷ್ ಕಾಲದಲ್ಲಿ ನಿರ್ಮಿತವಾದ ಹಳೆ ಡಿಸಿ ಆಫೀಸ್, ಅದರ ಬಣ್ಣ ಮತ್ತು ಹಳೆಯ ನೋಟದಿಂದ ಸುಂದರವಾಗಿತ್ತು. ಅದರ ವಿಶಿಷ್ಟ ವಾಸ್ತುಶಿಲ್ಪ ಶೈಲಿಗೆ ಪ್ರಸಿದ್ಧವಾಗಿದೆ.

 

ಇದೀಗ ಹೊಸ ಡಿಸಿ ಕಚೇರಿ ಮಂಗಳೂರಿನ ಪಡೀಲ್ ನಲ್ಲಿ ಮೇ 16, 2025 ರಂದು 'ಪ್ರಜಾಸೌಧ' ಎಂಬ ಹೆಸರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಯ ಆಡಳಿತ ಮೂಲ ಸೌಕರ್ಯದಲ್ಲಿ ಮಹತ್ವದ ಮೈಲುಗಲ್ಲು ಇದಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಿಂದ ₹20 ಕೋಟಿ ಅನುದಾನ ಸೇರಿದಂತೆ ₹75 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಈ ಸಂಕೀರ್ಣವು ಸುಮಾರು 23 ಸರ್ಕಾರಿ ಇಲಾಖೆಗಳನ್ನು ಒಳಗೊಂಡಿರುತ್ತದೆ.

 

ಹಳೆಯ ಮತ್ತು ಹೊಸ ಜಿಲ್ಲಾಡಳಿತ ಕಚೇರಿಗಳು ಮಂಗಳೂರಿನ ಇತಿಹಾಸ ಮತ್ತು ಪ್ರಗತಿಯನ್ನು ಪ್ರತಿಬಿಂಬಿಸುತ್ತವೆ. ಹಳೆಯ ಕಚೇರಿ ಅದರ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡರೆ, ಹೊಸ ಕಚೇರಿ ಆಧುನಿಕ ಆಡಳಿತ ಕಾರ್ಯಗಳನ್ನು ಸುಗಮಗೊಳಿಸಲಿದೆ.