29 October 2025 | Join group

ಇನ್ನು ಮುಂದೆ 'ರಾಜನಾಥ್' ಮಾವು ಮಾರುಕಟ್ಟೆಗೆ : ಮಾವಿನ ಹಣ್ಣಿಗೆ ರಕ್ಷಣಾ ಸಚಿವರ ಹೆಸರಿಟ್ಟ 'ಮ್ಯಾಂಗೋ ಮ್ಯಾನ್'

  • 07 Jun 2025 02:15:58 AM

ಭಾರತದ 'ಮ್ಯಾಂಗೋ ಮ್ಯಾನ್' ಎಂದೇ ಖ್ಯಾತಿಯನ್ನು ಪಡೆದಿರುವ ಕರೀಮುಲ್ಲಾ ಖಾನ್ ರವರ ಮಾವಿನ ತಳಿ ನೋಡೋದೇ ತುಂಬಾ ಆನಂದದಾಯಕ. ಪ್ರತಿ ಬಾರಿಯೂ ತನ್ನ ಪ್ರಯೋಗ ನಡೆಸುತ್ತಲೇ ಇರುತ್ತಾರೆ.

 

ಈಗ ಮತ್ತೊಮ್ಮೆ ತನ್ನ ಹೊಸ ತಳಿಯ ಮಾವಿನ ತಳಿಗೆ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಹೆಸರು ಇಟ್ಟು ಸುದ್ದಿಯಲ್ಲಿದ್ದಾರೆ.

 

ಮೂಲತಃ ಉತ್ತರ ಪ್ರದೇಶದ ಕರೀಮುಲ್ಲಾ ಖಾನ್, ತಮ್ಮ ವಿಶಿಷ್ಟ ಕಸಿ ತಂತ್ರಜ್ಞಾನ ಬಳಸಿ ಹೊಸ ಮಾವಿನ ತಳಿಗಳನ್ನು ಬೆಳೆಸುತ್ತಾರೆ. ಇದೀಗ ಅವರ ತೋಟದಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಮಾವಿನ ತಳಿಗೆ ಇನ್ಮುಂದೆ 'ರಾಜನಾಥ್ ಮಾವು' ಎಂದು ಹೆಸರಿಟ್ಟಿದ್ದಾರೆ.

 

ಇವರು ಈ ಹಿಂದೆ ಅಭಿವೃದ್ಧಿಪಡಿಸಿದ ತಳಿಗಳಿಗೆ ಪ್ರಧಾನಿ ಮೋದಿ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ಗೃಹ ಸಚಿವ ಅಮಿತ್ ಷಾ, ಮಾಜಿ ಕ್ರಿಕೆಟರ್ ಸಚಿನ್, ನಟಿ ಐಶ್ವರ್ಯ ರೈ ಮುಂತಾದವರ ಹೆಸರು ಇಟ್ಟಿರುತ್ತಾರೆ.