ಜಿಲ್ಲೆಯಲ್ಲಿ ಬಹಳ ಸುದ್ದಿಯಾಗಿದ್ದ ಕಾರ್ಕಳ ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಬ್ಬರಿಗೂ ಜಾಮೀನು ದೊರೆತಿದೆ. ಕಳೆದ ವರ್ಷ ಅ. 20 ರಂದು ಬಾಲಕೃಷ್ಣ ಪೂಜಾರಿ(44) ಅವರ ಕೊಲೆಗೆ ಸಂಬಂಧಪಟ್ಟಂತೆ ಅವರ ಪತ್ನಿ ಪ್ರತಿಮಾ(36) ಬಂಧನಕೊಳಗಾಗಿದ್ದರು.
ಇದೀಗ ಪ್ರಮುಖ ಆರೋಪಿ ಪ್ರತಿಮಾಗೆ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮತ್ತೊಬ್ಬ ಆರೋಪಿ ದಿಲೀಪ್ ಹೆಗ್ಡೆ ಕೂಡ ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಪ್ರತಿಮಾ ಮತ್ತು ದಿಲೀಪ್ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದು, ಸಂಚು ರೂಪಿಸಿ ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಆರೋಪದಡಿ ಅ. 25 ರಂದು ಅಜೆಕಾರು ಪೊಲೀಸರು ಇಬ್ಬರನ್ನು ಬಂಧಿಸಿದ್ದರು.
ಆರೋಪಿ ಪ್ರತಿಮಾ ರವರ ಅಣ್ಣ 'ನನ್ನ ತಂಗಿ ಮಾಡಿದ್ದೂ ತಪ್ಪು ಕೆಲಸ, ನಾನು ಯಾವತ್ತೂ ಸಪೋರ್ಟ್ ಮಾಡಲ್ಲ ಮತ್ತು ಆಕೆಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಹೇಳಿರುವ ಹೇಳಿಕೆಗಳು ಅಂದಿನ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಹರಿದಾಡುತ್ತಿದ್ದವು.