ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಕೆಲ ವ್ಯಾಪಾರ ವಹಿವಾಟುಗಳು ತೊಂದರೆ ಅನುಭವಿಸಿದೆ. ಭಾರತದಿಂದ ಇರಾನ್ ಗೆ ಅತೀ ಹೆಚ್ಚು ಬಸ್ಮಾತಿ ಅಕ್ಕಿ ರಫ್ತಾಗುತ್ತದೆ.
ಆದರೆ, ಈ ಸಂಘರ್ಷದ ಕಾರಣದಿಂದ ಭಾರತದ ಬಂದರುಗಳಲ್ಲಿ ಇರಾನ್ ಗೆ ರಫ್ತು ಆಗಬೇಕಾಗಿದ್ದ 1 ಲಕ್ಷ ಟನ್ ಬಸ್ಮಾತಿ ಅಕ್ಕಿ ಭಾರತದ ಬಂದರುಗಳಲ್ಲೇ ಉಳಿದುಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ವರದಿ ಮಾಡಿದೆ.
ಸೌದಿ ಅರೇಬಿಯಾದ ನಂತರ ಭಾರತದಿಂದ ಇರಾನ್ ಗೆ ಅತೀ ಹೆಚ್ಚು ಬಸ್ಮಾತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ.
ಕಳೆದ ಒಂದು ವರ್ಷದಲ್ಲಿ ಭಾರತ ಒಟ್ಟು 10 ಲಕ್ಷ ಟನ್ ಬಸ್ಮಾತಿ ಅಕ್ಕಿಯನ್ನು ರಫ್ತು ಮಾಡಿದೆ. ಸದ್ಯಕ್ಕೆ 20% ರಷ್ಟು ಬಸ್ಮಾತಿ ಅಕ್ಕಿ ಬಂದರಿನಲ್ಲಿ ಉಳಿದಿದೆ ಎಂದು ತಿಳಿದುಬಂದಿದೆ