ನವದೆಹಲಿಯಲ್ಲಿ ಜೈನ ಸಂತರಾಗಿರುವ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಧರ್ಮ ಚಕ್ರವರ್ತಿ ಎಂಬ ಬಿರುದನ್ನು ಪ್ರದಾನ ಮಾಡಲಾಯಿತು. ನಮ್ಮ ನಮ್ರತೆಯಿಂದ ಸ್ವೀಕರಿಸಿದ ಮೋದಿ ನಾನು ಇದಕ್ಕೆ ಸೂಕ್ತನೆಂದು ಭಾವಿಸುವುದಿಲ್ಲ. ಆದರೆ ನಾನು ಸ್ವಂತರಿಂದ ಏನೇ ಸ್ವೀಕರಿಸಿದರು ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ ನಾನು ಈ ಪ್ರಸಾದವನ್ನು ವಿನಮ್ರವಾಗಿ ಸ್ವೀಕರಿಸಿ ಭಾರತ ಮಾತೆಗೆ ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ
ಈ ಕಾರ್ಯಕ್ರಮದಲ್ಲಿ ಮುಂದಕ್ಕೆ ಮಾತನಾಡಿದ ಪ್ರಧಾನಿ ಮೋದಿ ಅವರು ಜೂನ್ 28, 1987 ರಂದು ಆಚಾರ್ಯ ವಿದ್ಯಾನಂದರಿಗೆ ಆಚಾರ್ಯ ಎಂಬ ಬಿರುದು ದೊರೆತಿತ್ತು. 'ಇದು ಕೇವಲ ಗೌರವವಲ್ಲ ಬದಲಾಗಿ ಜೈನ ಸಂಸ್ಕೃತಿಯನ್ನು ಸಂಯಮ ಮತ್ತು ಕರುಣೆಗೆ ಸಂಪರ್ಕಿಸುವ ಪವಿತ್ರದಾರ' ಎಂದು ಹೇಳಿದರು. ಆಚರಣೆಗಳು ಶಿಸ್ತು ಬದ್ಧ ತಪಸ್ವಿ ಜೀವನದ ಜ್ಞಾಪನೆ ಎಂದು ಬಣ್ಣಿಸುತ್ತ ಆಚಾರ್ಯರಿಗೆ ಗೌರವ ಸಲ್ಲಿಸಿದರು.
ಇದು ಜೈನ ಸಂತತಿಯಿಂದ ನೀಡಲಾದ ಉನ್ನತ ಪ್ರಶಸ್ತಿ ಎನ್ನಲಾಗಿದೆ. ವಿದ್ಯಾನಂದ ಮಹಾರಾಜ್ ಮಹಾರಾಜರು 50ಕ್ಕೂ ಹೆಚ್ಚು ವಿದ್ವತ್ ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ.