ಮಂಗಳೂರು : ಮಂಗಳೂರು ಪೋಲಿಸ್ ಇಲಾಖೆ ನಗರದಲ್ಲಿ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ಹಿತ ದೃಷ್ಠಿಯಿಂದ ಈ ವರ್ಷದಲ್ಲಿ ಬರುವ ಹಬ್ಬಗಳಾದ ಕೃಷ್ಣ ಜನ್ಮಾಷ್ಟಮಿ, ಮೊಹರಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಕ್ರಿಸ್‌ಮಸ್ ಸೇರಿದಂತೆ ಹಬ್ಬಗಳ ಸಮಯದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗಳನ್ನು ನಡೆಸಲು ಅದರ ಮುಂದಾಳತ್ವ ವಹಿಸುವವರು ಕಡ್ಡಾಯವಾಗಿ ಪೋಲಿಸ್ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಿ ಕಾರ್ಯಕ್ರಮ ನಡೆಸಬೇಕೆಂದು ಮಂಗಳೂರು ನಗರ ಪೊಲೀಸ್ ಇಲಾಖೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುವುದರ ಜೊತೆಗೆ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.