06 July 2025 | Join group

ಜೂನ್ ತಿಂಗಳ ಮಳೆಯ ಅಂಕಿಅಂಶಗಳಲ್ಲಿ ಉಡುಪಿ ದೇಶದಲ್ಲೇ ನಂಬರ್ 1: ದಾಖಲೆಯ ಮಳೆ!

  • 06 Jul 2025 11:25:02 AM

ಮಂಗಳೂರು: ಕರಾವಳಿಯಲ್ಲಿ ಬಹಳ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಳೆದ ಎರಡು ದಶಕಗಳಲ್ಲಿ ಈ ವರ್ಷ ಅತಿ ಹೆಚ್ಚು ಮಳೆಯಾಗಿದೆ ಎಂದು IMD ದತ್ತಾಂಶವು ದೃಢಪಡಿಸುತ್ತದೆ. ಜೂನ್ ತಿಂಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಮಳೆಯಾಗುವ ದಾಖಲೆಯನ್ನು ಉಡುಪಿ ಜಿಲ್ಲೆ ಭಾರೀ ಮಳೆಗೆ ಹೆಸರುವಾಸಿಯಾಗಿರುವ ಮೇಘಾಲಯದ ಚಿರಾಪುಂಜಿ ಮತ್ತು ಕರ್ನಾಟಕದ ಆಗುಂಬೆಯನ್ನು ಹಿಂದಿಕ್ಕಿದೆ.

 

ಜೂನ್ ತಿಂಗಳ ಮಳೆಯ ಅಂಕಿಅಂಶಗಳ ಪ್ರಕಾರ, ಕೇವಲ ಒಂದು ತಿಂಗಳಲ್ಲಿ 1,140 ಮಿಮೀ ಮಳೆಯೊಂದಿಗೆ ಉಡುಪಿ ಜಿಲ್ಲೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೂನ್‌ನಲ್ಲಿ ಸತತ ಮೂರು ದಿನಗಳವರೆಗೆ, ಉಡುಪಿ ಪ್ರತಿದಿನ 150 ಮಿಮೀ ಮಳೆಯನ್ನು ದಾಖಲಿಸಿದೆ. ಇದು ಅಪರೂಪದ ಮತ್ತು ಗಮನಾರ್ಹ ಸಂಗತಿ ಎನ್ನಲಾಗಿದೆ.

 

ಉಡುಪಿ: 1,140 ಮಿ.ಮೀ ಮಳೆಯಾದರೆ, ದಕ್ಷಿಣ ಕನ್ನಡ: 980 ಮಿ.ಮೀ ಮಳೆಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿಗೂ ಹೆಚ್ಚು ಕಾಲದಿಂದ ತೀವ್ರ ಮತ್ತು ಸ್ಥಿರವಾದ ಮಳೆಯಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ಒಟ್ಟು 15 ದಿನಗಳಿಗೂ ಹೆಚ್ಚು ರೆಡ್ ಅಲರ್ಟ್ ಮತ್ತು ಇನ್ನಿತರ ದಿನಗಳಲ್ಲಿ ಕೂಡ ನಿಗಾ ಇರಿಸಲಾಗಿತ್ತು.

 

ಇದೆ ರೀತಿ ಮಳೆ ಸುರಿದರೆ ವಾರ್ಷಿಕ ಸರಾಸರಿ 4,300 ಮಿಮೀ ಮಳೆಯೊಂದಿಗೆ, ಈ ವರ್ಷ ಉಡುಪಿಗೆ ಹೊಸ ದಾಖಲೆಯಾಗುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಹವಾಮಾನ ಅಸಮಾತೋಲನ ನಾನಾ ರೀತಿಯ ಅನಾಹುತಗಳಿಗೆ ಕೂಡ ಕಾರಣವಾಗುತ್ತಿದೆ ಎಂಬ ವಿಚಾರ ಕೂಡ ಗಮನಾರ್ಹವಾಗಿದೆ.