ಮಂಗಳೂರು: ನಗರದ ಕೊಟ್ಟಾರ ಚೌಕಿ 66 ರ ಹೆದ್ದಾರಿ ಬಳಿ, ಮಹಾನಗರ ಪಾಲಿಕೆಯ ಬಂಗ್ರಕೂಳೂರು ವಾರ್ಡಿನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ನೂತನ 'ಸಿಂಧೂರ ವಿಜಯ' ಉದ್ಯಾನವನ ಶನಿವಾರ ಉದ್ಘಾಟನೆಗೊಂಡಿತು.
'ಸೈನಿಕರ ತ್ಯಾಗ ಬಲಿದಾನವನ್ನು ಸದಾ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ದೇಶದ ಗಡಿ ಭಾಗಗಳಲ್ಲಿ ದೇಶದ ಸುರಕ್ಷತೆಗಾಗಿ ಜೀವನ ತ್ಯಾಗ ಮಾಡುತ್ತಿದ್ದಾರೆ. ಈ ಉದ್ದೇಶದಿಂದ ನಗರವನ್ನು ಪ್ರವೇಶಿಸುವ ದ್ವಾರದಲ್ಲೇ ಉದ್ಯಾನವನ್ನು ನಿರ್ಮಿಸಿದರ ಬಗ್ಗೆ ಸಂತೃಪ್ತಿ ಇದೆ' ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.
ಭಾರತೀಯ ಸೈನಿಕರನ್ನು ನೆನಪಿಸುವ ಸಲುವಾಗಿ 42.35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಉದ್ಯಾನವನ ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಮತ್ತಷ್ಟು ಸುಂದರತೆಯನ್ನು ತರಲಿದೆ.