ಬೆಂಗಳೂರು: ಈಗಾಗಲೇ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ದೊರಕುತ್ತಿದೆ. ಆದರೆ ಗಂಡು ಮಕ್ಕಳು ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂಬ ಮಾತು ಬಹುಮಟ್ಟಿಗೆ ಸತ್ಯ.
ಈ ನಡುವೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರೆಡ್ಡಿ ಅವರ ಹೇಳಿಕೆ ಹಳೆಯ ನಿಯಮದಲ್ಲಿ ಬದಲಾವಣೆ ಸಂಭವಿಸಬಹುದೆಂಬ ಸೂಚನೆ ನೀಡಿದೆ.
"ರಾಜ್ಯದ ಹಣಕಾಸಿನ ಸ್ಥಿತಿ ಸುಧಾರಿತವಾಗಿದ್ರೆ ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್ ಯೋಜನೆ ತರಲು ಯೋಚನೆ ಇದೆ" ಎಂದಿದ್ದಾರೆ.
ಈ ಹೇಳಿಕೆ ಜನರಲ್ಲಿ ಆಶೆ ಹುಟ್ಟುಹಾಕಿದ್ದು, ಹಿಂದಿನ ಚುನಾವಣೆ ಭರವಸೆಗಳನ್ನು ನೆನೆಪಿಸುತ್ತದೆ.
ಇತ್ತ ಬಿಜೆಪಿ - ಜೆಡಿಎಸ್ ಪಕ್ಷಗಳು "ಪುಕ್ಸಟೆ ಭಾಗ್ಯ ಯೋಜನೆಗಳೇ ರಾಜ್ಯದ ಆರ್ಥಿಕ ಸ್ಥಿತಿ ಹಾಳುಮಾಡಿದೆ" ಎಂದು ಮತ್ತೆ ಕಿಡಿಕಾರಿವೆ.