13 July 2025 | Join group

ಧರ್ಮಸ್ಥಳ ಅಸ್ತಿಪಂಜರ ಪ್ರಕರಣ: ಸಾಕ್ಷಿಗಳ ಹೆಸರು ಬಹಿರಂಗ, ತನಿಖೆಗೆ ಬಂಟ್ವಾಳ ಡಿವೈಎಸ್ಪಿ ನೇತೃತ್ವ!

  • 12 Jul 2025 12:44:13 PM

ಬೆಳ್ತಂಗಡಿ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ದೂರುದಾರದಿಂದ ಅಸ್ಥಿಪಂಜರದ ಅವಶೇಷಗಳನ್ನು ನ್ಯಾಯಾಲಯ ಪಡೆದುಕೊಂಡಿದೆ. ಧರ್ಮಸ್ಥಳದಲ್ಲಿ ರಹಸ್ಯವಾಗಿ ಅವುಗಳನ್ನು ಹೊರ ತೆಗೆದಿರುವುದಾಗಿ ಹೇಳಿಕೊಂಡಿದ್ದ ವ್ಯಕ್ತಿಯಲ್ಲಿದ್ದ ಸಾಕ್ಷ್ಯಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

ದೂರುದಾರದ ಗುರುತಿನ ರಕ್ಷಣೆಗೆ ಸಂಬಂಧಿಸಿದಂತೆ, ಮಾಧ್ಯಮಗಳಲ್ಲಿ ವರದಿ ಮತ್ತು ಎಫ್ಐಆರ್ ಪ್ರತಿ ಸಾರ್ವಜನಿಕ ವೇದಿಕೆಗಳಲ್ಲಿ ವಯಸ್ಸು, ಸ್ವರೂಪ, ಅವಧಿ, ಕೆಲಸದ ಸ್ಥಳ ಹಾಗೆ ಇನ್ನಿತರ ವಿವರಗಳು ಪ್ರಸಾರವಾಗಿರುವುದರಿಂದ ಸ್ಥಳೀಯರು ದೂರುದಾರರ ಗುರುತನ್ನು ಅಂದಾಜಿಸುವಂತಾಗಿದೆ ಎಂದು ಪ್ರಕಟಣೆಯಲ್ಲಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಈ ಗಂಭೀರ ಲೋಪವನ್ನು ಪರಿಗಣಿಸಿರುವ ಪೊಲೀಸ್ ಇಲಾಖೆ, ಸಾಕ್ಷಿಯ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸದಿರಲು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದು, ಸಾಕ್ಷಿದಾರರ ಗುರುತನ್ನು ಬಹಿರಂಗ ಪಡಿಸಿದವರ ವಿರುದ್ಧ ಬಂಟ್ವಾಳ ಪೊಲೀಸ್ ಡಿವೈಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿನೂರಾರು ಹೆಣ ಹೂತು ಹಾಕಿರುವ ವ್ಯಕ್ತಿ ಸಂಪೂರ್ಣ ಮುಸುಕುಧಾರಿಯಾಗಿ ಕೋರ್ಟಿಗೆ ಹಾಜರು