13 July 2025 | Join group

ಜ್ವರ ಪರೀಕ್ಷೆಗೆ ಹೋದ ಶಾಲಾ ಬಾಲಕಿಗೆ ಗರ್ಭಿಣಿ ಎಂದು ವರದಿ ಕೊಟ್ಟ ವೈದ್ಯಾಧಿಕಾರಿ: ಪ್ರಕರಣ ದಾಖಲು

  • 12 Jul 2025 03:25:16 PM

ಸುಳ್ಯ: ಜ್ವರದಿಂದ ಬಳಲುತ್ತಿದ್ದ ಶಾಲಾ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಪೋಷಕರಿಗೆ ಬೆಚ್ಚಿ ಬೀಳುವ ರೀತಿಯಲ್ಲಿ ವರದಿ ನೀಡಿದ ಪ್ರಕರಣ ಸುಳ್ಯ ತಾಲೂಕಿನ ಪಂಜ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ನಡೆದಿದೆ.

 

ತೀವ್ರ ಜ್ವರದ ಹಿನ್ನಲೆ 13 ವರ್ಷದ ಶಾಲಾ ಬಾಲಕಿಯನ್ನು ಪಂಜ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತಪಾಸಣೆ ನಡೆಸಲು ಕರೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ ಅಲ್ಲಿನ ವ್ಯೆದ್ಯಾಧಿಕಾರಿ ಬಾಲಕಿಯನ್ನು ತಪಾಸಣೆ ಮಾಡಿದ ನಂತರ ರೋಗಿಗಳ ದಾಖಲಾತಿಯಲ್ಲಿ ಯುಪಿಟಿ ಪಾಸಿಟಿವ್ ಅಂದರೆ ಗರ್ಭಿಣಿ ಎಂದು ಬರೆದಿದ್ದಾರೆ.

 

ವ್ಯೆದ್ಯಾಧಿಕಾರಿ ತಿಳಿಸಿದಂತೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಪೋಷಕರು ಅಲ್ಲಿಯೂ ಪರೀಕ್ಷೆ ನಡೆಸಿ ಯಾವುದೇ ಗರ್ಭಧಾರಣೆಯ ಕುರಿತು ದೃಡೀಕರಣವಾಗಿಲ್ಲ.

 

ಅತೀವ ಗಾಬರಿಗೊಂಡಿದ್ದ ಪೋಷಕರು ಬಾಲಕಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಮಗಳು ಗರ್ಭಿಣಿಯಲ್ಲ ಎಂಬ ವರದಿ ಲಭಿಸಿತ್ತು.

 

ಈ ಬಗ್ಗೆ ಪೋಷಕರು ದೂರು ನೀಡಿದ್ದು, ಡಿಎಚ್ಒ ಡಾ. ಎಚ್.ಆರ್. ತಿಮ್ಮಯ್ಯ ತಂಡ ರಚಿಸಿದ್ದು, ಜುಲೈ 10 ರಂದು ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆಗಾಗಿ ತಂಡ ರಚಿಸಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಾಗುವುದು ಎಂದು ತಿಳಿಸಿದ್ದಾರೆ.