ಲಕ್ನೋ (ಯುಪಿ): ಲವ್ ಜಿಹಾದ್ ಎಂಬ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮತಾಂತರಗೊಳಿಸಲು ತೀವ್ರ ಸಂಚು ರೂಪಿಸಿದ್ದ ಛಂಗೂರ್ ಬಾಬಾ ಅಲಿಯಾಸ್ ಜಮಾಲುದ್ದೀನ್ ಎಂಬ ಸ್ವಯಂಘೋಷಿತ ದೇವಮಾನವನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ತನಿಖಾ ಅಧಿಕಾರಿಗಳ ಪ್ರಕಾರ, ಈ ವ್ಯಕ್ತಿ ಮೂರು ವರ್ಷಗಳಲ್ಲಿ ವಿದೇಶಿ ಕೊಲ್ಲಿ ರಾಷ್ಟ್ರಗಳಿಂದ 106 ಕೋಟಿ ರೂ. ನಿಗದಿತವಾಗಿ ಪಡೆದು, ಹಲವಾರು ಮುಸ್ಲಿಂ ಯುವಕರನ್ನು ನೇಮಿಸಿ ಹಿಂದೂ ಯುವತಿಯರನ್ನು ಗುರಿಯಾಗಿಸಲು ಬಳಸುತ್ತಿದ್ದ ಎನ್ನಲಾಗಿದೆ.
14 ರಿಂದ 24 ವರ್ಷದ ಹಿಂದೂ ಯುವತಿಯರು, ಬಡ ಕುಟುಂಬಗಳ ಮಹಿಳೆಯರು ಮತ್ತು ವಿಧವೆಯರು ಈ ಬಾಬಾ ಗ್ಯಾಂಗ್‌ಗಳ ಟಾರ್ಗೆಟ್ ಆಗಿದ್ದರು. ಪ್ರೇಮ, ವಿವಾಹ, ಮನೆ ನೀಡುವ ಭರವಸೆ ನೀಡಿ, ಬಳಿಕ ಮತಾಂತರಕ್ಕೆ ಒತ್ತಾಯ ಮಾಡಲಾಗುತ್ತಿತ್ತು. ಕೆಲವರನ್ನು ಬಲವಂತವಾಗಿ ಮತಾಂತರಗೊಳಿಸಿರುವ ಶಂಕೆಯೂ ಇದೆ.
ಬ್ರಾಹ್ಮಣ, ಕ್ಷತ್ರಿಯ, ಒಬಿಸಿಗಳ ಮತಾಂತರಕ್ಕೆ ಒಂದೊಂದು ದರ ಫಿಕ್ಸ್ ಮಾಡಿ ಹಣ ಪಡೆಯುತ್ತಿದ್ದ ಬಾಬಾ. ಈತ ಪಾಕಿಸ್ತಾನದ ಸಲಹೆ ಕೂಡ ಪಡೆಯುತ್ತಿದ್ದ ಎನ್ನಲಾಗಿದೆ.
ಈ ಘಟನೆಯ ನಂತರ ಯುಪಿ ಎಟಿಎಸ್, ಇಂಟೆಲಿಜೆನ್ಸ್ ಘಟಕಗಳು ತೀವ್ರ ತನಿಖೆಗೆ ಮುಂದಾಗಿದ್ದು, ದೇಶಾದ್ಯಂತ ಈ ಜಾಲ ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.