ಅಮೇರಿಕಾ: ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ವಿಮಾನ ದುರಂತ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ರೀತಿಯ ಘಟನೆಗಳು ವಿಮಾನ ಪ್ರಯಾಣಿಕರನ್ನು ಅಧೈರ್ಯದ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಇದೀಗ ಅಮೆರಿಕಾದ ಡೆನ್ವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಮತ್ತೊಂದು ದುರಂತ ವರದಿಯಾಗಿದೆ. ದುರದುಷ್ಟಕರ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಅಮೆರಿಕದ ಡೆನ್ವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ ಏರ್ ಲೈನ್ಸ್ ವಿಮಾನವು ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಅಮೇರಿಕಾ ಏರ್ ಲೈನ್ಸ್ ವಿಮಾನದ ಎಡಬಾಗದ ಮುಖ್ಯ ಲ್ಯಾಂಡಿಂಗ್ ಗೇರ್ ನಲ್ಲಿ ಬೆಂಕಿ ಕಾಣಿಸಿದ್ದು ವಿಮಾನದ ಕೆಳಗೆ ಹೋಗೆ ಆವರಿಸಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ತುರ್ತು ದ್ವಾರಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
AA3023 ವಿಮಾನವು ಟೇಕ್ ಆಫ್ ಆಗಿ ಮಿಯಾಮಿಗೆ ತೆರಳುತ್ತಿದ್ದ ಸಮಯದಲ್ಲಿ ರನ್ವೇ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ವರದಿ ಪ್ರಕಾರ ಒಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ. ವಿಮಾನದಲ್ಲಿ 173 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ವರ್ಗದವರಿದ್ದರು ಎಂದು ತಿಳಿದುಬಂದಿದೆ. ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ನಿಖರವಾದ ಕಾರಣ ತನಿಖೆಯ ನಂತರ ಹೊರಬೀಳಲಿದೆ.