ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗಿಂತ ಹೆಚ್ಚು ಕೆಲಸ ಕಾರ್ಯಗಳನ್ನು ಮಾಡಿಸಿದ್ದಾರೆ ಎಂಬ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಿದ್ದರಾಮಯ್ಯರ ಹೇಳಿಕೆ ಬಾರಿ ಚರ್ಚೆಗೆ ಭಾಸವಾಗಿದೆ. ಇದಕ್ಕೆ ಮೈಸೂರಿನ ಬಿಜೆಪಿ ಸಂಸದ ಮತ್ತು ಒಡೆಯರ್ ವಂಶಸ್ತ ಯದುವೀರ್ ಒಡೆಯರ್ ರವರು ತಿರುಗೇಟು ನೀಡಿದ್ದಾರೆ.
'ರಾಜಪ್ರಭುತ್ವ, ಪ್ರಜಾಪ್ರಭುತ್ವ ಯಾವುದೇ ಇದ್ದರೂ ಜನರ ಕೆಲಸ ಮಾಡುವುದೇ ಇಲ್ಲಿ ಮುಖ್ಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಕೆಲಸ ಜನರ ಹಿತಕ್ಕಾಗಿ. ಸರ್ವೆ ಮಾಡಿಸಿದರೆ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ.
'ನಮಗೆ ಅಧಿಕಾರ ಸಿಕ್ಕರೆ ಜನರಿಗಾಗಿ ಕೆಲಸ ಮಾಡಬೇಕು. ಅದು ಪಂದ್ಯಾವಳಿ ಅಲ್ಲ, ಜನರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡಬೇಕಾಗಿದೆ. ಅದನ್ನು ಬಿಟ್ಟು ಹೋಲಿಕೆ ಮಾಡಿಕೊಂಡು ಹೇಳಿಕೆ ಕೊಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿನವರು ಜನರ ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.