ಧರ್ಮಸ್ಥಳ: ಇಲ್ಲಿ ನಡೆಯುತ್ತಿರುವ ಹೆಣ ಹೂತ ಸ್ಥಳದಲ್ಲಿ ನಡೆಯುವ ತನಿಖೆಯಲ್ಲಿ 1 ರಿಂದ 5 ಪಾಯಿಂಟ್ ವರೆಗೆ ನಿನ್ನೆ ವರೆಗೆ ಏನು ಸಿಕ್ಕಿಲ್ಲದಿದ್ದರು, ಇಂದು 6 ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಮೂಲಗಳ ಪ್ರಕಾರ 6 ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಎಸ್ಐಟಿ ಅಧಿಕಾರಿಗಳು ಇದರ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲವಾದರೂ, ಅನಧಿಕೃತವಾಗಿ ಈ ವಿಚಾರ ತಿಳಿದುಬಂದಿದೆ.
ಇತರ ಮಾಧ್ಯಮಗಳಲ್ಲಿ ಕೂಡ ಪ್ರಸಾರವಾಗುವಂತೆ, 6 ನೇ ಪಾಯಿಂಟ್ ನಲ್ಲಿ ಮೂಳೆಗಳು ಸಿಕ್ಕಿದ್ದು ಅದನ್ನು ಎಸ್ಐಟಿ ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಧಿ ವಿಜ್ಞಾನ ಅಧಿಕಾರಿಗಳಿಗೆ ಸಿಕ್ಕಿದ ಹೆಣದ ಅವಶೇಷಗಳನ್ನು ನೀಡಿದ್ದು, ಮುಂದಿನ ತನಿಖೆ ನಡೆಯಲಿದೆ. ಇದರ ಜೊತೆಗೆ ಅದೇ ಸ್ಥಳದಲ್ಲಿ ಮತ್ತಷ್ಟು ತನಿಖೆ ನಡೆಸಿ, ಸಂಪೂರ್ಣ ಅವಶೇಷಗಳನ್ನು ಪಡೆಯುವ ಕಾರ್ಯಪ್ರಕ್ರಿಯೆ ನಡೆಸುತ್ತಿದ್ದಾರೆ.