ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೆಂಪುಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರಕಾರದ ನೀತಿಯನ್ನು ವಿರೋಧಿಸಿ ದಕ್ಷಿಣ ಕನ್ನಡ ಬಿಜೆಪಿ ಇಂದು ಬೃಹತ್ ಪ್ರತಿಭಟನಾ ಧರಣಿಯುನ್ನು ಕೈಗೊಂಡಿದೆ.
ಬಿಜೆಪಿ ಪಕ್ಷದ ಮುಖಂಡರು ಇಂದು ಬೆಳಿಗ್ಗೆ ಮಂಗಳೂರು ಮಿನಿ ವಿಧಾನಸೌಧ ಮುಂದೆ ಕೈಯಲ್ಲಿ ಹಾರೆ, ಪಿಕ್ಕಾಸು ಹಿಡಿದು ಪ್ರತಿಭಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಮಿಕರ ಹಕ್ಕುಗಳನ್ನು ಹಿಂಸಿಸುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಗೆ ಖಂಡನೆ, ಒಟ್ಟಾಗಿ ಬಂದು ನಮ್ಮ ಧ್ವನಿಯನ್ನು ಬಲವಾಗಿ ಕೇಳಿಸೋಣ ಎಂಬ ದ್ಯೇಯೊಂದಿಗೆ ಸಮಯ: ಬೆಳಗ್ಗೆ 9:00 – ಸಂಜೆ 5:00 ರವರೆಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿದೆ.