ಬೆಂಗಳೂರು: ಸೈಬರ್ ಅಪರಾಧ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿಂದೆ ಜನ ಸಾಮಾನ್ಯರ ಅಕೌಂಟ್ ಗೆ ಕನ್ನ ಹಾಕುತ್ತಿದ್ದ ಸೈಬರ್ ವಂಚಕರು ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ದೇಶದ ಪ್ರತಿಷ್ಠಿತ ವ್ಯಕ್ತಿಗಳ ಅಕೌಂಟ್ ಗೆ ಕೈ ಹಾಕುತ್ತಿದ್ದಾರೆ.
ಇದೀಗ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ 3 ಲಕ್ಷ ರೂ.ಗಳನ್ನು ದೋಚಿದ್ದ ಘಟನೆ ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ 75ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ಡಿ.ವಿ. ಸದಾನಂದ ಗೌಡ ಹಿಂದಿನ ದಿನ ತನ್ನ ಮೂರು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು, ಪ್ರತಿ ಖಾತೆಯಿಂದ 1 ಲಕ್ಷ ರೂ.ಗಳಂತೆ ಒಟ್ಟು 3 ಲಕ್ಷ ರೂ. ವಂಚನೆಗೊಳಗಾಗಿರುವುದಾಗಿ ಗೌಡ ಬಹಿರಂಗಪಡಿಸಿದ್ದಾರೆ.
ಆಶ್ಚರ್ಯವೆಂದರೆ, ಪ್ರತಿಷ್ಠಿತ ಬ್ಯಾಂಕ್ ಗಳ ಖಾತೆ ಹೊಂದಿದ್ದ ಅಕೌಂಟ್ ನಿಂದಲೇ ಹಣ ಕಳವು ಆಗಿರುತ್ತದೆ. HDFC, SBI ಮತ್ತು Axis ಬ್ಯಾಂಕ್‌ಗಳಿಗೆ ಸೇರಿದ ಅಕೌಂಟ್ ಗಳಾಗಿರುತ್ತದೆ ಮತ್ತು UPI ವಹಿವಾಟಿನ ಮೂಲಕ ಕಳ್ಳತನ ನಡೆದಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಗೌಡ ತಿಳಿಸಿದ್ದಾರೆ.





