ಪುತ್ತೂರು : ಪುತ್ತೂರಿನ ಬೊಳುವಾರಿನ ಪ್ರಭು ಮಾಲಕ ಸುಧಾಕರ್ ಪ್ರಭು ಮಾರ್ಚ್ 20 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 50 ವರುಷ ಪ್ರಾಯವಾಗಿತ್ತು. ಬಚ್ಚಲು ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳ ಮೂಲಕ ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರ ಮುಂದಿನ ತನಿಖೆಯ ನಂತರ ನಿಜವಾದ ಕಾರಣ ತಿಳಿದು ಬರಲಿದೆ. ಪೊಲೀಸರು ಕೇಸು ರಿಜಿಸ್ಟರ್ ಮಾಡಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
"ಆತ್ಮಹತ್ಯೆ ಯಾವುದೇ ಸಮಸ್ಯೆಯ ಪರಿಹಾರವಲ್ಲ. ಬದುಕಿನಲ್ಲಿ ಎಷ್ಟೇ ಕಠಿಣ ಕ್ಷಣಗಳು ಬಂದರೂ, ಸಹಾಯವನ್ನು ಬೇಡಿ, ಹೊಸದಾಗಿ ಜೀವನವನ್ನು ಕಟ್ಟಿಕೊಳ್ಳಿ. ನಿಮ್ಮಅಸ್ತಿತ್ವವೇ ನಿಮ್ಮ ಕುಟುಂಬದ ಮತ್ತು ಸ್ನೇಹಿತರಿಗಾಗಿ ಅಮೂಲ್ಯವಾಗಿದೆ."