26 October 2025 | Join group

ಮಂಗಳೂರು ಗೋ ಕಳ್ಳತನ ಪ್ರಕರಣ: ಪೊಲೀಸರ ಪ್ರಶಂಸನೀಯ ಕಾರ್ಯ – ಗೋವನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಬೇಕೆಂದು ಮುಸ್ಲಿಂ ಮುಖಂಡರಿಂದಲೂ ಕೂಗು

  • 19 Sep 2025 11:34:27 AM

ಮಂಗಳೂರು: ನಗರದ ಅಡ್ಯಾರ್ ಬಳಿಯ ತಜಿಕೋಡಿ ಪ್ರದೇಶದಲ್ಲಿ ಉಮೇಶ್ ಆಳ್ವ ಅವರ ಮನೆಯ ಅಂಗಳದಿಂದ ಕ್ರಾಸ್ ಜರ್ಜಿ ಹಸುವನ್ನು ಕಳ್ಳತನ ಮಾಡಿರುವ ಪ್ರಕರಣದಲ್ಲಿ ಕಂಕನಾಡಿ ನಗರ ಪೊಲೀಸರು ಶೀಘ್ರ ಚುರುಕಿನ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

 

ಬಂಧಿತರು ಅಡ್ಯಾರ್ ಗಾನದ ಬೆಟ್ಟು ನಿವಾಸಿ ಶಾಬಾಸ್ ಅಹಮದ್, ವಳಚ್ಚಿಲ್ ನಿವಾಸಿ ಮಹಮ್ಮದ್ ಸುಬಾನ್ ಹಾಗೂ ವಳಚ್ಚಿಲ್ ಖಾದರ್ ಮೊಹಮ್ಮದ್ (ಕೋಳಿ ಮೊನಕ್ಕ) ಎಂದು ಗುರುತಿಸಲಾಗಿದೆ.

 

ರಾತ್ರಿ ವೇಳೆ ಮನೆಯ ಹಟ್ಟಿಯಿಂದ ಹಸುವನ್ನು ಕೊಂಡೊಯ್ಯುವ ದೃಶ್ಯವನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಿಸಲಾಗಿದ್ದು, ಅದನ್ನು ಆಧಾರವಾಗಿ ಪಡೆದು ಪೊಲೀಸರು ಅಲ್ಪ ಸಮಯದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದರು. ಕೆಲವೇ ಗಂಟೆಗಳಲ್ಲಿ ಹಸುವನ್ನು ಪತ್ತೆಹಚ್ಚಿ ಅದರ ಮಾಲೀಕರಿಗೆ ಹಿಂತಿರುಗಿಸಿದ ಪೊಲೀಸರು ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

ಮುಸ್ಲಿಂ ಧಾರ್ಮಿಕ ಮುಖಂಡರು ಈ ಘಟನೆಯನ್ನು ಖಂಡಿಸಿ, “ಗೋ ಕಳ್ಳತನ ಇಸ್ಲಾಂ ಧರ್ಮಕ್ಕೆ ವಿರುದ್ಧ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಮಾತನಾಡಿ, “ಕಳ್ಳತನ ಮಾಡಿದ ಹಸುವನ್ನು ತಿನ್ನುವುದು ಹರಾಮ್, ವಿಶೇಷವಾಗಿ ಗಾಯಗೊಂಡಿರುವ ಅಥವಾ ಗರ್ಭಿಣಿ ಹಸುವನ್ನು ಕೊಂದು ತಿನ್ನುವುದು ಅತ್ಯಂತ ಪಾಪದ ಕಾರ್ಯ” ಎಂದು ಹೇಳಿದ್ದಾರೆ.

 

ಇದೇ ವೇಳೆ, ಜನಸಾಮಾನ್ಯರು ಮತ್ತು ಧಾರ್ಮಿಕ ಮುಖಂಡರು ಗೋವನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದು, ಗೋಪ್ರಿಯರು ಇದನ್ನು ಸಂತಸದ ಸಂಗತಿ ಎಂದು ಸ್ವಾಗತಿಸಿದ್ದಾರೆ.