26 October 2025 | Join group

ಕಂಬಳ ಸೀಸನ್ 2025-26: ಸೆಪ್ಟೆಂಬರ್ 28 ರಂದು ಮಹತ್ವದ ಸಭೆ

  • 19 Sep 2025 03:43:30 PM

ದಕ್ಷಿಣ ಕನ್ನಡ: 2025-26 ನೇ ಸಾಲಿನ ಕಂಬಳದ ದಿನ ನಿಗದಿ ಇದೇ ಬರುವ ಸೆಪ್ಟೆಂಬರ್ 28, 2025 ರಂದು ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ನಿಗದಿತ ದಿನದಂದು ಅಪರಾಹ್ನ 3.30ಕ್ಕೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಸೇರಲಿದೆ.

 

ರಾಜ್ಯ ಸರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಂಬಳಕ್ಕೆ ಈಗಾಗಲೇ ಒಟ್ಟು ರೂ.40 ಲಕ್ಷ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬರಲಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

ಮುಂದಿನ ಸೀಸನ್ ಕಂಬಳದ ನಿಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ತರುವ ನೀರೀಕ್ಷೆಯಿದ್ದು, ಕಂಬಳವನ್ನು ನಿಗದಿತ ಸಮಯದಲ್ಲಿ ಮುಗಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಂದೇ ಕಂಬಳ ನಡೆಯುವ ದಿನಗಳ ಪಟ್ಟಿ ಕೂಡ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.