ಮಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈಗಾಗಲೇ ಮೆಟ್ರೋ, ಬಸ್, ಹಾಲು, ನೀರು, ವಿದ್ಯುತ್ ಹೀಗೆ ಹಲವಾರು ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಲ್ಲೂ ದೇವಾಲಯಗಳ ಸೇವಾ ದರ ಹೆಚ್ಚಳ ಮಾಡಿ, ಮತ್ತಷ್ಟು ಹೊರೆ ಹೆಚ್ಚಿಸಿದೆ.
ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಸೇವಾ ದರದಲ್ಲಿ ಹೆಚ್ಚಳವಾಗಿದ್ದು, ಇನ್ಮೇಲೆ ದೇವರ ಸೇವಾದರ ಭಾರೀ ಏರಿಕೆಯಾಗಲಿದೆ. 100 ರಿಂದ 150 ರೂಪಾಯಿ ಹೆಚ್ಚಳ ಮಾಡಿದ ಧಾರ್ಮಿಕ ದತ್ತಿ ಇಲಾಖೆ ಭಕ್ತರಿಗೆ ಮತ್ತಷ್ಟು ದರ ಏರಿಕೆ ಬಿಸಿ ಮುಟ್ಟಿಸಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಎ ಗ್ರೇಡ್ ಕ್ಷೇತ್ರಗಳಲ್ಲಿ ದೇವರ ಸೇವೆಗೆ ಡಬ್ಬಲ್ ಚಾರ್ಜ್ ನೀಡಲಾಗಿದೆ.





