ಬೆಂಗಳೂರು: ಖ್ಯಾತ ಪತ್ರಕರ್ತೆ ಹಾಗೂ ವಿಜಯ ಟೈಮ್ಸ್ ಚಾನೆಲ್‌ನ ಮುಖ್ಯಸ್ಥೆ ವಿಜಯಲಕ್ಷ್ಮಿ ಶಿಬರೂರು ಅವರಿಗೆ ನಿನ್ನೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ವಿಜಯಲಕ್ಷ್ಮಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ನೀಡುತ್ತಿರುವ ಅವರ ಅಸಾಧಾರಣ ಸೇವೆ ಹಾಗೂ ನಿರ್ಭಯ ಪತ್ರಿಕೋದ್ಯಮಕ್ಕಾಗಿ ಈ ಗೌರವ ಪ್ರದಾನ ಮಾಡಲಾಗಿದೆ.
ರಾಜ್ಯದ ಹಲವಾರು ಹಿರಿಯರು, ಪತ್ರಕರ್ತರು ಹಾಗೂ ಅಭಿಮಾನಿಗಳು ಪ್ರಶಸ್ತಿ ಸ್ವೀಕರಿಸಿದ ನಂತರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿಜಯಲಕ್ಷ್ಮಿ ಶಿಬರೂರುರವರು, "ಪ್ರಶಸ್ತಿ ತುಂಬಾ ಖುಷಿ ಕೊಟ್ಟಿದೆ. ಸಿಕ್ಕಿದ ಪರಿಸರ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಹಾಗಾಗಿ ಈ ಪ್ರಶಸ್ತಿಯನ್ನು ಎಲ್ಲಾ ಪರಿಸರ ಪ್ರೇಮಿಗಳಿಗೆ, ಪರಿಸರ ಪ್ರೀತಿಸುವವರಿಗೆ ಇದನ್ನು ಅರ್ಪಿಸುತ್ತಿದ್ದೇನೆ. ಪರಿಸರ ಉಳಿಸಿದರೆ ಮಾತ್ರ ಬದುಕಲು ಸಾಧ್ಯವಿದೆ. ಪ್ರಕೃತಿ ಮಾತೆಯನ್ನು ಆರಾಧಿಸಬೇಕಾಗಿದೆ. ನಮಗೆ ಪ್ರಕೃತಿಯೇ ಧರ್ಮ ಆಗಬೇಕಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ" ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.





