26 October 2025 | Join group

ಎರಡು ಪಾನಿಪುರಿಗಾಗಿ ನಡು ರಸ್ತೆಯಲ್ಲಿ ಧರಣಿ ಕುಳಿತ ಮಹಿಳೆ - ವಿಡಿಯೋ ವೈರಲ್

  • 20 Sep 2025 01:44:27 PM

ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯು ಹೆಣ್ಣುಮಕ್ಕಳಿಗೆ ಗೋಲ್ಗಪ್ಪ ಅಂದರೆ ಪಂಚಪ್ರಾಣವೇ ಆಗಿರುತ್ತೆ. ಆದರೆ ಮಹಿಳೆಯೊಬ್ಬಳು ಪಾನಿಪುರಿಗಾಗಿ ನಡುರಸ್ತೆಯಲ್ಲಿ ಧರಣಿ ಕುಳಿತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಗುಜರಾತ್​ನ ವಡೋದರಾದ  ಮಹಿಳೆಯೊಬ್ಬರು ತಮ್ಮ ನಿವಾಸದ ಸಮೀಪ ಇರುವ ಸುರಸಾಗರ ಸರೋವರ ಬಳಿ ಪಾನಿಪುರಿ ತಿನ್ನಲು ಹೋಗಿದ್ದಾರೆ. ಸುರಸಾಗರ ಸರೋವರ ಬಳಿಯ ಅಂಗಡಿಯಲ್ಲಿ 20 ರೂಪಾಯಿಗೆ 6 ಪಾನಿಪುರಿಗಳು ಕೊಡಲಾಗುತ್ತದೆ. ಆದರೆ ಮಹಿಳೆ ಪಾನಿಪುರಿ ತಿನ್ನುವಾಗ ಕೇವಲ ನಾಲ್ಕೇ 4 ಪಾನಿಪುರಿಗಳನ್ನು ಅಂಗಡಿಯವನು ಕೊಟ್ಟಿದ್ದಾನಂತೆ.


ಹೀಗಾಗಿ ಮಹಿಳೆ ಇನ್ನೆರಡು ಪಾನಿಪುರಿಗಾಗಿ ರಂಪಾಟ ಮಾಡಿದ್ದಾಳೆ. ನೀನು 4 ಪಾನಿಪುರಿ ಹಾಕಿರುವುದು. 6 ಪಾನಿಪುರಿ ಹಾಕಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದಾಳೆ.  ತಾನು ಕಳೆದುಕೊಂಡ ಎರಡೇ 2 ಪಾನಿಪುರಿಗಾಗಿ ಮಹಿಳೆ ರಸ್ತೆ ಮಧ್ಯೆ ಕುಳಿತು ಧರಣಿ ಆರಂಭಿಸಿದ್ದಾಳೆ. ಆ ಎರಡು ಪಾನಿಪುರಿ ಕೊಡುವವರೆಗೂ ನನ್ನ ಧರಣಿ ಮುಂದುವರೆಯುತ್ತದೆ ಎಂದು ಕಣ್ಣೀರು ಇಡುತ್ತ ಹೇಳಿದ್ದಾಳೆ.

 

ಸವಾರರು ರಸ್ತೆ ಮಧ್ಯೆ ಆಕೆ ಕುಳಿತ್ತಿದ್ದರಿಂದ ಮೆಲ್ಲಗೆ ಪಕ್ಕದಿಂದ ಹಾದು ಹೋಗಿದ್ದಾರೆ. ಆದರೂ ಟ್ರಾಫಿಕ್​ ಬಿಸಿ ಜೋರಾಗಿತ್ತು. ಹೀಗಾಗಿ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಏನು ಎಂದು ಆ ದಡೂತಿ ಮಹಿಳೆಯನ್ನು ಕೇಳಿದ್ದಾರೆ. ಅದಕ್ಕೆ 20 ರೂಪಾಯಿಗೆ 6 ಪಾನಿಪುರಿ ಕೊಡಬೇಕು. ಆದ್ರೆ 4 ಕೊಟ್ಟಿದ್ದಾನೆ. ಇನ್ನು ಎರಡು ಕೊಡುತ್ತಿಲ್ಲ ಎಂದು ಮಹಿಳೆ ಪೊಲೀಸರ ಎದುರು ಕಣ್ಣೀರು ಹಾಕುತ್ತ ಹೇಳಿದ್ದಾಳೆ.

 

A woman started crying and protesting on the road in Surat, because a Panipuriwala gave her 4 panipuris instead of 6 for 20Rs

Grave injustice .pic.twitter.com/v3tTbFW02O

— ???????????????????????? * (@ggganeshh) September 19, 2025