ಉಡುಪಿ: ಸಮುದ್ರದಲ್ಲಿ ಆಟವಾಡುತ್ತ ಈಜಾಡುತ್ತಿದ್ದ 6 ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ವಿದ್ಯಾರ್ಥಿ ಸಾವಿಗೀಡಾದ ಘಟನೆ ಶನಿವಾರ ಮಧ್ಯಾಹ್ನ ಕಟಪಾಡಿಯ ಮಟ್ಟು ಬೀಚ್ ಬಳಿ ನಡೆದಿದೆ.
ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ವೀರೂರುಲ್ಕರ್ ( 18) ಮೃತಪಟ್ಟ ವಿದ್ಯಾರ್ಥಿ.
ಸ್ಥಳೀಯರು ಈ ವಿದ್ಯಾರ್ಥಿಗಳ ತಂಡವನ್ನು ಎಚ್ಚರಿಸಿದ್ದರೂ ಕೂಡ ನಿರ್ಲಕ್ಷಿಸಿದ್ದಾರೆ.
ಸ್ಥಳೀಯರಾದ ಆರ್ಯನ್, ಪ್ರವೀಣ್ ಮತ್ತಿತರರು ರಕ್ಷಣಾ ಕಾರ್ಯ ನಡೆಸಿದ್ದರು. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.





