26 October 2025 | Join group

ಬಂಟ್ವಾಳ ಕಂಚಿನಡ್ಕದಲ್ಲಿ ಹೊಂಡಕ್ಕೆ ಬಿದ್ದು ಯುವಕನ ಮೃತ್ಯು!

  • 21 Sep 2025 12:26:23 PM

ಬಂಟ್ವಾಳ: ಯುವಕನೋರ್ವ ಆಕಸ್ಮಿಕವಾಗಿ ನೀರು ತುಂಬಿದ್ದ ಹೊಂಡಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸೆ.20ರ ಕಂಚಿನಡ್ಕಪದವು ಎಂಬಲ್ಲಿ ನಡೆದಿದೆ.

 

ಉಳ್ಳಾಲ ತಾಲೂಕಿನ ಇರಾ ಸಮೀಪದ ಸೂತ್ರಬೈಲು ನಿವಾಸಿ ಉಮ್ಮರ್ ಅವರ ಪುತ್ರ ಅಬ್ದುಲ್ ಅಮೀರ್ (23) ಮೃತಪಟ್ಟ ಯುವಕ.

 

ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ. 20ರಂದು ಸಂಜೆ ಇತರರ ಜತೆ ಸಜೀಪಮೂಡ ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಕೆಲಸಕ್ಕೆ ಹೋಗಿದ್ದು, ಸಂಚ ಕೆಲಸ ಮುಗಿಸಿ ಅಲ್ಲೇ ಸಮೀಪದಲ್ಲಿದ್ದ ನೀರು ತುಂಬಿದ್ದ ಹೊಂಡ ಕೈಕಾಲು ಮುಖ ತೊಳೆಯಲು ಹೋದ ವೇಳೆ ಬಿದ್ದಿದ್ದಾರೆ.

 

ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅಮೀರ್ ನನ್ನು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.