ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್
ದಕ್ಷಿಣ ಕನ್ನಡ: ಕರಾವಳಿ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ರಾತ್ರಿ 5-20mm ತನಕ ಸಾಮಾನ್ಯ ಮಳೆಯಾಗಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬೆಳಿಗ್ಗೆ ಬಿಸಿಲಿನ ವಾತಾವರಣ ಇರಲಿದ್ದು ಮಧ್ಯಾಹ್ನ ಮೋಡ ಬರಲಿದ್ದು ಅಲ್ಲಲ್ಲಿ ಸಣ್ಣ ಮಳೆ ಆರಂಭವಾಗಬಹುದು. ರಾತ್ರಿ ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಒಂದೆರಡು ಸಾಧಾರಣ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ದ.ಕ ಜಿಲ್ಲೆಗಳ ಕರಾವಳಿ ತೀರ ಮತ್ತು ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆಯಾಗಬಹುದು. ಪುತ್ತೂರು ಬಂಟ್ವಾಳ ತಾಲ್ಲೂಕುಗಳಲ್ಲಿ ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬಂಗಾಲಕೊಲ್ಲಿ ವಾಯುಭಾರಕುಸಿತದ ಪ್ರಭಾವದಿಂದ ದ.ಕ ಜಿಲ್ಲೆಯಲ್ಲಿ ಸೆಪ್ಟೆಂಬರ್ 30 ತನಕ ಸಂಜೆ-ರಾತ್ರಿ ಮಳೆ ಮುಂದುವರೆಯಬಹುದು.
ಬಂಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿ ಲೋ ಪ್ರೆಷರ್ ಆಗಲಿದ್ದು ಇದು ಪಶ್ಚಿಮಕ್ಕೆ ಚಲಿಸಲಿದ್ದು ಒರಿಸ್ಸಾ ಆಂಧ್ರ ಮೂಲಕ ಸೆ. 27ಕ್ಕೆ ಚಲಿಸಿ ದುರ್ಬಲ ಆಗಬಹುದು. ಸೆ. 28 ಕ್ಕೆ ಮುಂಬೈ ಸಮೀಪ ಅರಬ್ಬೀಸಮುದ್ರದಲ್ಲಿಯೂ ವಾಯುಭಾರ ಕುಸಿತ ಆಗುವ ಮುನ್ಸೂಚನೆ ಇದೆ. ಇದರ ಪರಿಣಾಮ ರಾಜ್ಯದಲ್ಲಿ ಹಿಂಗಾರು ಮಾದರಿಯಲ್ಲಿ ಸಂಜೆ - ರಾತ್ರಿ ಮಳೆ ಸೆಪ್ಟೆಂಬರ್ 30 ತನಕ ಮುಂದುವರೆಯಬಹುದು.





