25 October 2025 | Join group

ಚಿನ್ನಯ್ಯ ದಂಪತಿಯ ಖಾತೆಗೆ ಹಣ ವರ್ಗಾವಣೆ ಆರೋಪ; ತಿಮರೋಡಿಯ 11 ಆಪ್ತರ ವಿಚಾರಣೆಗೆ ಎಸ್ ಐ ಟಿ ನೋಟಿಸ್

  • 23 Sep 2025 10:57:21 AM

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಮತ್ತು ಆತನ ಪತ್ನಿಯ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಎಸ್‌.ಐ.ಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಯ 11 ಮಂದಿ ಆಪ್ತರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.

 

 ಈಗಾಗಲೇ 6 ಮಂದಿಯನ್ನು ಎಸ್.ಐ.ಟಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ಮಾಡಿರುವುದಾಗಿ ತಿಳಿದು ಬಂದಿದೆ. ಉಳಿದ ಐದು ಮಂದಿಯನ್ನು ವಿಚಾರಣೆ ಮಾಡಲು ಬಾಕಿ ಇದ್ದು ಅವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

 

ಬ್ಯಾಂಕ್ ಖಾತೆಗಳ ಮೂಲಕವಾಗಿಯೇ ಹಣ ವರ್ಗಾವಣೆ ಮಾಡಲಾಗಿರುವುದಾಗಿ ತಿಳಿದು ಬಂದಿದೆ.