ಅಹಮದಾಬಾದ್: ಇಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ರೇಬೀಸ್‌ನಿಂದ ಸಾವನಪ್ಪಿದ ಭೀಕರ ದುರಂತ ನಡೆದಿದೆ. ಅಹಮದಾಬಾದ್ ನ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಬನ್‌ರಾಜ್ ಮಂಜಾರಿಯಾ ತನ್ನ ಸಾಕು ನಾಯಿ ಗೀಚಿದ ಪರಿಣಾಮ ಜೀವನನ್ನೇ ಕಳೆದುಕೊಂಡಿದ್ದಾರೆ.
5 ದಿನಗಳ ಹಿಂದೆ, ಅವರ ಸಾಕುಪ್ರಾಣಿ ಜರ್ಮನ್ ಶೆಫರ್ಡ್‌ನ ಉಗುರು ಅವರನ್ನು ಗೀಚಿತು. ನಾಯಿಗೆ ಲಸಿಕೆ ಹಾಕಲಾಗಿದ್ದು ಅದು ಕಚ್ಚಿಲ್ಲದ ಕಾರಣ, ಅವರು ಚಿಕಿತ್ಸೆಯನ್ನು ನಿರ್ಲಕ್ಷಿಸಿದರು. ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಉಳಿಸಲಾಗಲಿಲ್ಲ.
ವೈದ್ಯರ ಪ್ರಕಾರ, ಯಾವುದೇ ಪ್ರಾಣಿ ಕಚ್ಚಿದರೆ ಅಥವಾ ಉಗುರು ಗೀಚಿದರೆ – ಅದು ಸಾಕುಪ್ರಾಣಿಯಾಗಿರಲಿ, ಲಸಿಕೆ ಹಾಕಿದ್ದಿರಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಪ್ರಾಣಿಗಳ ಕಚ್ಚು ಅಥವಾ ಗೀಚಾಟವನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಮುನ್ನೆಚ್ಚರಿಕೆ ನಿಮ್ಮ ಜೀವವನ್ನು ಉಳಿಸುತ್ತದೆ ಎನ್ನುತ್ತಾರೆ.





