25 October 2025 | Join group

2047 ರವರೆಗೆ ಮೋದಿ ಪ್ರಧಾನಿಯಾಗಿರುತ್ತಾರೆ – ರಾಜನಾಥ್ ಸಿಂಗ್ ಅವರ ಅಚ್ಚರಿಯ ಭವಿಷ್ಯವಾಣಿ!

  • 23 Sep 2025 03:11:24 PM

ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಇತ್ತೀಚಿಗೆ ಹಿಂದಿ ಮಾಧ್ಯಮವಾದ ಎಬಿಪಿ ಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಸುದ್ದಿ ನಿರೂಪಕಿ ಕೇಳಿದ ಪ್ರಶ್ನೆಗೆ ಬಹಳ ಕುತೂಹಲಕರಿಯಾದ ಹೇಳಿಕೆಯೊಂದನ್ನು ನೀಡಿದ್ದಾರೆ.

 

ಪತ್ರಕರ್ತೆ ಚಿತ್ರಾ ತ್ರಿಪಾಠಿಯವರು, 2029 ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಯಾರು? ಎಂದು ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದರು ಅದಕ್ಕೆ ಪ್ರತಿಯುತ್ತರವಾಗಿ "ಪ್ರಧಾನಿ ಮೋದಿ 2029, 2034, 2039 ಮತ್ತು 2044 ರಲ್ಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಉಳಿಯುತ್ತಾರೆ"

 

"2047 ರ ವೇಳೆಗೆ ವಿಕ್ಷಿತ್ ಭಾರತದ ಧ್ಯೇಯವನ್ನು ಪೂರೈಸಿದ ನಂತರವೇ ಅವರು ಸ್ಥಾನದಿಂದ ಕೆಳಗಿಳಿಯುತ್ತಾರೆ" ಎಂದು ಹೇಳುತ್ತಾ ತಮ್ಮ ನಗೆಯನ್ನು ಬೀರಿದರು.